Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Breaking : ‘ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತೇನೆ’: BCCIಗೆ ವಿರಾಟ್ ಕೊಹ್ಲಿ | Virat kohli

10/05/2025 8:02 AM

BREAKING : ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಲು IMF ಅನುಮೋದನೆ

10/05/2025 7:48 AM

ಪಾಕಿಸ್ತಾನದಿಂದ ಫಿರಂಗಿ ಶೆಲ್ ದಾಳಿ : ಜಮ್ಮು ಮತ್ತು ಕಾಶ್ಮೀರ ಅಧಿಕಾರಿ ಸಾವು, ಸಿಎಂ ಒಮರ್ ಸಂತಾಪ | India – Pak war

10/05/2025 7:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು: MLC ಛಲವಾದಿ ನಾರಾಯಣಸ್ವಾಮಿ ಒತ್ತಾಯ
KARNATAKA

ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು: MLC ಛಲವಾದಿ ನಾರಾಯಣಸ್ವಾಮಿ ಒತ್ತಾಯ

By kannadanewsnow0929/01/2024 3:44 PM

ಬೆಂಗಳೂರು: ಗೌರವಾನ್ವಿತ ರಾಷ್ಟ್ರಪತಿಯವರನ್ನು ಅವಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಅಹಿಂದ ಹೆಸರಿನಲ್ಲಿ ಕರೆದ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೌರವಾನ್ವಿತ ರಾಷ್ಟ್ರಪತಿಗಳಾದ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಖಂಡನೀಯ ಎಂದು ಹೇಳಿದರು.

ಒಬ್ಬ ದಲಿತ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿಗಳು ಇಷ್ಟೊಂದು ಕೀಳಾಗಿ ಅವರನ್ನು ಸಂಬೋಧಿಸಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಸರಿಯಾದ ಪದಗಳಲ್ಲ. ಅದಾದ ಬಳಿಕವೂ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿರಿಯರನ್ನು ಹಳ್ಳಿ ಭಾಷೆಯಲ್ಲಿ ಹಾಗೇ ಕರೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಹಳ್ಳಿಯ ಜನರನ್ನೂ ಅವರು ಅಪಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಯಾವ ಹಳ್ಳಿ ಜನರು, ಬಡವರು ಯಾರೇ ಇದ್ದರೂ ಕೂಡ ಯಾವತ್ತೂ ಯಾರನ್ನು ಕೂಡ ಕೇವಲವಾಗಿ ಅಥವಾ ಏಕವಚನದಲ್ಲಿ ಸಂಬೋಧಿಸುವುದಿಲ್ಲ ಎಂದು ವಿಶ್ಲೇಷಿಸಿದರು. ಹಳ್ಳಿ ಜನರು ಹಿರಿಯರನ್ನು ಗೌರವದಿಂದಲೇ ಮಾತನಾಡುತ್ತಾರೆ ಎಂದು ನುಡಿದರು.

ಮಾನ್ಯ ಮುಖ್ಯಮಂತ್ರಿಗಳು ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಒಂದುವೇಳೆ ನೀವು ಹಿರಿಯರನ್ನು ಹೋಗೋ ಬಾರೋ ಅನ್ನುವುದಾದರೆ, ಅವಳು ಇವಳು ಎಂಬ ಭಾಷೆ ಪ್ರಯೋಗ ಮಾಡುವುದೇ ಆದರೆ, ಸೋನಿಯಾ ಗಾಂಧಿಯವರು ಹಿರಿಯರಲ್ಲವೇ? ಎಷ್ಟು ಸಾರಿ ನೀವು ಸೋನಿಯಾ ಗಾಂಧಿಯವರನ್ನು ಅವಳು, ಇವಳು ಎಂದು ಮಾತನಾಡಿದ್ದೀರಿ ಎಂದು ಕೇಳಿದರು.

ಸಿದ್ದರಾಮಯ್ಯನವರು ಟೀಚರ್ ಇಟ್ಟುಕೊಳ್ಳಲಿ..

ಸಿದ್ದರಾಮಯ್ಯನವರು ತಮ್ಮ ಕೆಟ್ಟ ಭಾಷೆಯನ್ನು ಬದಲಿಸಲು ಟೀಚರ್ ಇಟ್ಟುಕೊಳ್ಳಲಿ. ‘ನೋಡಿ ಬೇಕಾದರೆ ನಾನೇ ಬರುವೆ’ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಯಾರ್ಯಾರನ್ನು ಯಾವ್ಯಾವ ರೀತಿ ಸಂಬೋಧಿಸಬೇಕೆಂದು ಹೇಳಿ ಕೊಡುವೆ ಎಂದು ಹೇಳಿದರು.

ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಎಷ್ಟು ಸಾರಿ ನೀವು ಅವನು, ಇವನು ಎಂದು ಮಾತನಾಡಿದ್ದೀರಿ? ರಾಹುಲ್ ಗಾಂಧಿಯವರನ್ನು ಎಷ್ಟು ಸಾರಿ ನೀವು ಈ ರೀತಿ ಮಾತನಾಡಿದ್ದೀರಿ? ಪ್ರಿಯಾಂಕ ಅವರ ಬಗ್ಗೆ ಎಷ್ಟು ಸಾರಿ ನೀವು ಈ ರೀತಿ ಮಾತನಾಡಿದ್ದೀರಿ? ಮಾನ್ಯ ಖರ್ಗೆಜೀ ಅವರ ಬಗ್ಗೆ ಎಷ್ಟು ಸಾರಿ ನೀವು ಈ ರೀತಿ ಮಾತನಾಡಿದ್ದೀರಿ? ನಿದರ್ಶನ ಬೇಕಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಅಧಿಕಾರ ನಿಮಗೆ ಮೈಮೇಲೆ ಬಂದಂತಿದೆ. ಇದು ದುರಹಂಕಾರದ ಪರಮಾವಧಿ ಎಂದು ನುಡಿದರು. ನಿಮ್ಮನ್ನು ಸುಳ್ಳು ರಾಮಯ್ಯ ಎಂಬ ಜೊತೆಗೆ ದುರಹಂಕಾರಿ ರಾಮಯ್ಯ ಎಂದೂ ಹೇಳಬಹುದು. ಮುಖ್ಯಮಂತ್ರಿಯಾದರೂ ಕೂಡ ನಿಮ್ಮ ಭಾಷೆ ಬದಲಾಗಿಲ್ಲವೇ ಎಂದು ಪ್ರಶ್ನೆ ಮಾಡಿದರು.

ರಾಷ್ಟ್ರಪತಿಗಳು ದಲಿತ ಸಮುದಾಯಕ್ಕೆ ಸೇರಿದ ಕಾರಣ ತುಚ್ಛ ಭಾಷೆ ಬಳಸಿದ್ದಾರೆ ಎಂದು ಆಪಾದಿಸಿದರು. ನೀವು ಸೋನಿಯಾ ಗಾಂಧಿಯವರನ್ನು ಅವಳು, ಇವಳು ಎಂದು ಮಾತನಾಡಿದ್ದರೆ ನಾನು ಇವತ್ತು ಇದನ್ನು ಪ್ರಸ್ತಾಪ ಮಾಡುತ್ತಿರಲಿಲ್ಲ ಎಂದರಲ್ಲದೆ, ಮುರ್ಮುರವರ ಕಪ್ಪು ಬಣ್ಣದ ಬಗ್ಗೆ ಕೂಡ ನೀವು ಪ್ರಥಮದಲ್ಲಿ ಮಾತನಾಡಿದ್ದೀರಿ ಎಂದು ಆಕ್ಷೇಪ ಸೂಚಿಸಿದರು.

ಇವತ್ತು ರಾಜ್ಯ ಹೊತ್ತಿ ಉರಿಯುತ್ತಿದೆ. ಕೆರೆಗೋಡಿನಲ್ಲಿ ಈ ಪರಿಸ್ಥಿತಿ ಇದೆ. ಈ ದೇಶದಲ್ಲಿ ಭಾರತದ ಧ್ವಜ ಹಾರಿಸಲು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿದ್ದೀರಾ? ಕಂಬ 108 ಅಡಿ ಇದೆ. ಆ ಕಂಬದಲ್ಲಿ ಮುಕ್ಕಾಲು ಭಾಗದಲ್ಲಿ ಧ್ವಜ ಹಾರಿಸಿದ್ದಾರೆ. ಇದರ ಅರ್ಥ ಏನು? ನೀವು ಯಾರನ್ನು ಓಲೈಸಲು ಈ ರೀತಿ ಮಾಡುತ್ತಿದ್ದೀರಿ? ಪೊಲೀಸರು ಬೂಟುಗಾಲಿನಲ್ಲೇ ಸಂಜೆ 3 ಗಂಟೆಗೆ ಧ್ವಜ ಹಾರಿಸಿದ್ದಾರೆ. ಏನು ನಿಯಮಗಳು ಗೊತ್ತಿದೆಯೇ ನಿಮಗೆ? ಎಂದು ಖಾರವಾಗಿ ಪ್ರಶ್ನೆ ಮುಂದಿಟ್ಟರು. ಹನುಮಧ್ವಜ ಇಳಿಸಿದ್ದಕ್ಕೆ ಜನರು ನಿಮಗೆ ಉತ್ತರ ಕೊಡುತ್ತಾರೆ ಎಂದು ನುಡಿದರು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ದಲಿತರಿಗೆ ಮೀಸಲಾತಿ ಕೊಟ್ಟು ಸಂವಿಧಾನ ಜಾರಿ ಮಾಡಿದವರನ್ನು ಸಂವಿಧಾನ ವಿರೋಧಿ ಎನ್ನುತ್ತೀರಾ? ದಲಿತರಿಗೆ ಅಲ್ಲಿ 370 ರದ್ದು ಮಾಡುವವರೆಗೆ ಮೀಸಲಾತಿ ಸಿಕ್ಕಿರಲಿಲ್ಲ. ಮೀಸಲಾತಿ ಕೊಡಿಸಿದ್ದು ಮೋದಿಯವರು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ನುಚ್ಚು ನೂರಾಗಿ ಹೋಗುತ್ತಿದೆ. ಇಂಡಿ ಮೈತ್ರಿಕೂಟ ಚುನಾವಣೆ ವರೆಗೂ ಇರೋದಿಲ್ಲ. ಏನಾಗಿದೆ; ಉದುರುತ್ತ ಇದೆಯಲ್ಲ ಎಂದು ಕೇಳಿದರು.

BREAKING: ಮಂಡ್ಯದಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ: ಸಿಎಂ ಸಿದ್ಧರಾಮಯ್ಯ, ಶಾಸಕ ಗಣಿಗ ರವಿ ಬ್ಯಾನರ್ ಹರಿದು ಆಕ್ರೋಶ

ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಪದಚ್ಯುತಿ ಪಕ್ಕಾ.? : ‘ವಾಗ್ದಂಡನೆ ನಿರ್ಣಯ’ ಮಂಡನೆಗೆ ವಿಪಕ್ಷಗಳ ಸಿದ್ಧತೆ : ವರದಿ

Share. Facebook Twitter LinkedIn WhatsApp Email

Related Posts

ಭಾರತೀಯ ಸೇನೆಗೆ ಬೆಂಬಲ: ಬೆಂಗಳೂರಿನಲ್ಲಿ ಕಾಂಗ್ರೆಸ್ ‘ಜೈ ಹಿಂದ್ ತಿರಂಗಾ ಯಾತ್ರೆ’ | Jai Hind Yatra

10/05/2025 7:04 AM1 Min Read

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

10/05/2025 6:00 AM1 Min Read

GOOD NEWS: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

10/05/2025 5:59 AM1 Min Read
Recent News

Breaking : ‘ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತೇನೆ’: BCCIಗೆ ವಿರಾಟ್ ಕೊಹ್ಲಿ | Virat kohli

10/05/2025 8:02 AM

BREAKING : ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಲು IMF ಅನುಮೋದನೆ

10/05/2025 7:48 AM

ಪಾಕಿಸ್ತಾನದಿಂದ ಫಿರಂಗಿ ಶೆಲ್ ದಾಳಿ : ಜಮ್ಮು ಮತ್ತು ಕಾಶ್ಮೀರ ಅಧಿಕಾರಿ ಸಾವು, ಸಿಎಂ ಒಮರ್ ಸಂತಾಪ | India – Pak war

10/05/2025 7:44 AM

ಪೋಷಕರೇ ಗಮನಿಸಿ: ಪೋಸ್ಟ್‌ ಆಫೀಸ್‌ನಲ್ಲಿ ದಿನಕ್ಕೆ ಕೇವಲ 6 ರೂ.ಗಳನ್ನು ಠೇವಣಿ ಮಾಡಿ, ನಿಮ್ಮ ಮಗುವಿನ ಭವಿಷ್ಯವನ್ನು ಭದ್ರಪಡಿಸಿ..!

10/05/2025 7:18 AM
State News
KARNATAKA

ಭಾರತೀಯ ಸೇನೆಗೆ ಬೆಂಬಲ: ಬೆಂಗಳೂರಿನಲ್ಲಿ ಕಾಂಗ್ರೆಸ್ ‘ಜೈ ಹಿಂದ್ ತಿರಂಗಾ ಯಾತ್ರೆ’ | Jai Hind Yatra

By kannadanewsnow8910/05/2025 7:04 AM KARNATAKA 1 Min Read

ಬೆಂಗಳೂರು : ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲ ಸೂಚಿಸಿ, ಕಾಂಗ್ರೆಸ್ ನಾಯಕರು ಶುಕ್ರವಾರ ಜಂತರ್ ಮಂತರ್ ನಿಂದ ರೈಸಿನಾ ರಸ್ತೆಯಲ್ಲಿರುವ…

BREAKING: ಸಾಮಾಜಿಕ ಸಮೀಕ್ಷಾ ವರದಿ ನಿರ್ಣಯ ಮುಂದೂಡಿಕೆ: ರಾಜ್ಯ ಸಚಿವ ಸಂಪುಟದ ನಿರ್ಣಯ

10/05/2025 6:00 AM

GOOD NEWS: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಎಂ ಸಿದ್ಧರಾಮಯ್ಯ ಸಿಹಿಸುದ್ದಿ: ಗೌರವಧನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

10/05/2025 5:59 AM

Transfer of Government Employees : ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌..!

10/05/2025 5:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.