ಬೆಂಗಳೂರು: ಎಸಿಬಿ ರದ್ದುಗೊಂಡು, ಲೋಕಾಯುಕ್ತಕ್ಕೆ ಮರು ಜೀವ ಬರುತ್ತಿದ್ದಂತೆ, 2022ರ ಜೂನ್.18ರಿಂದ 2023ರ ಡಿಸೆಂಬರ್.31ರವರೆಗೆ ಒಂದೇ ವರ್ಷದಲ್ಲಿ 87 ಕಡೆಯಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಈ ದಾಳಿಯಲ್ಲಿ 307 ಭ್ರಷ್ಟ ಅಧಿಕಾರಿಗಳನ್ನು ಭೇಟಿಯಾದ್ರೂ, ಕೇವಲ 38 ತಪ್ಪಿತಸ್ಥ ಅಧಿಕಾರಿಗಳಿಗೆ ಮಾತ್ರವೇ ಶಿಕ್ಷೆಯಾಗಿರೋದಾಗಿ ತಿಳಿದು ಬಂದಿದೆ.
ಹೌದು ಎಸಿಬಿಯಿಂದ ಲೋಕಾಯುಕ್ಕೆ 1,171 ಪ್ರಕರಣಗಳು ವರ್ಗಾವಣೆಗೊಂಡ ನಂತ್ರ ಎಸಿಬಿಯಿದ್ದಾಗ 205 ಮಾತ್ರವೇ ಆಗಿದೆ. ಅದೇ ಲೋಕಾಯುಕ್ತದಲ್ಲಿ ಎಸಿಬಿಯ 942, ಲೋಕಾ ಹಳೇ ಕೇಸ್ 88, ಲೋಕಾ ಹೊಸ ಕೇಸ್ 433 ಸೇರಿದಂತೆ 1463 ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಆದ್ರೇ ತನಿಖೆಯ ನಂತ್ರ ಖುಲಾಸೆಯಾದಂತ ಪ್ರಕರಣಗಳು 83 ಆದ್ರೇ, ಶಿಕ್ಷೆಯಾಗಿರೋದು ಕೇವಲ 38 ಮಂದಿಗೆ ಮಾತ್ರ. ಇತರೆ 24 ಕೇಸ್ ಸೇರಿದಂತೆ ಒಟ್ಟು 145 ಕೇಸ್ ತನಿಖೆಯಾಗಿದೆ.
ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಯಾಗೋದಕ್ಕೆ ಕಾರಣ ಪೊಲೀಸರ ಮುಂದೆ ಹೇಳಿಕೆ ನೀಡುವ ದೂರುದಾರರು ಕೋರ್ಟ್ ನಲ್ಲಿ ಅದನ್ನ ಬದಲಾಯಿಸುತ್ತಾರೆ. ಟ್ರ್ಯಾಪ್ ಗೆ ಒಳಗಾದ ಅಧಿಕಾರಿಗಳು ದೂರುದಾರರ ಬಳಿಗೆ ಹೋಗಿ ಕೈ ಕಾಲು ಹಿಡಿದು ಬೇಡಿಕೊಳ್ಳುತ್ತಾರೆ. ಅಲ್ಲದೇ ಕೆಲ ಆಮಿಷಕ್ಕೆ ಒಳಗಾಗಿ ಅನೇಕ ಪ್ರಕರಣಗಳು ದಾಖಲಾದ್ರೂ ಭ್ರಷ್ಟರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
BREAKING: 7 ದಿನಗಳಲ್ಲಿ ‘ದೇಶಾದ್ಯಂತ’ CAA ಜಾರಿ: ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ
BREAKING : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಾದರೆ ಬಿಜೆಪಿಗೆ ನನ್ನ ಬೆಂಬಲ : ಜನಾರ್ಧನ್ ರೆಡ್ಡಿ