ಬೆಂಗಳೂರು : ಕಳೆದ ವರ್ಷ ಇಡೀ ದೇಶಾದ್ಯಂತ ಕೆಂಪು ರಾಣಿ ಎಂದೆ ಸುದ್ದಿಯಾಗಿದ್ದ ಟೊಮ್ಯಾಟೋ, ಜನರಿಗೆ ಕೈಗೆಟುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಏಕೆಂದರೆ ಕೆಜಿಗೆ 100, 200 ಏರಿದ್ದರೆ ಜನ ಕೊಂಡುಕೊಳ್ಳುತ್ತಿದ್ದರು, ಆದರೆ ಕಳೆದ ವರ್ಷ ಟೊಮೊಟೊ ಬೆಲೆ ಗಗನಕ್ಕೆರಿತ್ತು. ಅದಾದ ನಂತರ ಈರುಳ್ಳಿ ಕೂಡ ಮಧ್ಯದಲ್ಲಿ ಇದೀಗ ಬೆಳ್ಳುಳ್ಳಿ ಸರದಿ ಬಂದಿದೆ.
ಈಚೆಗೆ ಟೊಮೆಟೊ, ಈರುಳ್ಳಿ ದರಗಳು ಗ್ರಾಹಕರಿಗೆ ಬೆಚ್ಚಿ ಬೀಳಿಸಿದ್ದವು. ಈಗ ಬೆಳ್ಳುಳ್ಳಿ ಸರದಿ. ಬೆಳ್ಳುಳ್ಳಿಗೆ ಬಂಗಾರದ ಬೆಲೆ ಬಂದಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ತರಕಾರಿ ಮಾರುಕಟ್ಟೆ ಗಳಲ್ಲಿ ಬೆಳ್ಳುಳ್ಳಿ ಕೆ.ಜಿಗೆ 400 ರಿಂದ 500 ರೂ. ತಲುಪಿದ್ದು, ಬಹಳಷ್ಟು ಗ್ರಾಹಕರು ಅಂಗಡಿಗಳಲ್ಲಿ ದರ ಕೇಳಿ ಖರೀದಿಸದೇ ವಾಪಸಾಗುತ್ತಿರುವುದು ಸಾಮಾನ್ಯವಾಗಿದೆ.
ವಾರದಿಂದ ಈಚೆಗೆ ನಿತ್ಯವೂ ಬೆಲೆ ಹೆಚ್ಚುತ್ತಲೇ ಇದೆ. ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ ಬಹುತೇಕ ದುಪ್ಪಟ್ಟಾಗಿದೆ. ಹವಾಮಾನ ವೈಪರೀತ್ಯ ಹಾಗೂ ಮಳೆ ಕಡಿಮೆಯಾಗಿರು ವುದರಿಂದ ಬೆಳ್ಳುಳ್ಳಿ ಇಳುವರಿ ಗಣನೀಯ ವಾಗಿ ಕುಸಿತವಾಗಿದೆ. ಹೋಟೆಲ್,
ರೆಸ್ಟೋರೆಂಟ್, ದಾಬಾ, ಖಾನಾವಳಿಗಳಲ್ಲಿ ಬೆಳ್ಳುಳ್ಳಿ ಬಳಕೆ ಅಧಿಕವಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಬೆಳ್ಳುಳ್ಳಿ ಇಲ್ಲದೆ ಅಡುಗೆ ಅಪೂರ್ಣ. ಹೀಗಾಗಿ ಊಟದ ದರವನ್ನು ಹೆಚ್ಚಿಗೆ ಮಾಡಲಾಗದೇ, ಇತ್ತ ದುಬಾರಿ ದರ ನೀಡಿ ಬೆಳ್ಳುಳ್ಳಿಯನ್ನೂ ಖರೀದಿಸಲಾಗದೆ ಹೊಟೇಲ್ ಮಾಲೀಕರಿಗೆ ಸಂದಿಗ್ಧತೆಗೆ ಸಿಲುಕಿದ್ದಾರೆ.
ರೈತನಿಗೆ ಲಾಭವಿಲ್ಲ: ಕರ್ನಾಟಕದಲ್ಲಿ ಬೆಳ್ಳುಳ್ಳಿ ಹೆಚ್ಚಿಗೆ ಬೆಳೆಯುವುದಿಲ್ಲ. ಮಹಾರಾಷ್ಟ್ರ, ಮಧ್ಯೆ ಪ್ರದೇಶ, ರಾಜಸ್ಥಾನ ಗಳಿಂದ ಆಮದಾಗುತ್ತಿದೆ. ಅಲ್ಲಿಯೂ ಇಳುವರಿ ಕುಸಿತದಿಂದ ಆಮದು ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಬೆಳ್ಳುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಬೆಳೆ ಬೆಳೆದ ರೈತರಿ ಗೇನು ಲಾಭವಿಲ್ಲ. ಸಗಟು ವ್ಯಾಪಾರಿಗಳು ಬಹಳಷ್ಟು ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಗುಮಾನಿ ಮಾರುಕಟ್ಟೆಯಲ್ಲಿ ಹರಡಿದೆ.