ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 75ನೇ ಗಣರಾಜ್ಯೋತ್ಸವದಂದ ತಮ್ಮ ಶಾಸಕರ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಪೌರ ಕಾರ್ಮಿಕರನ್ನ ಗೌರವಿಸಿದ್ದಾರೆ. ಪೌರ ಕಾರ್ಮಿಕರು ಸದಾ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಶ್ರಮಿಕ ವರ್ಗದವರು. ಅಂಥವರನ್ನು ಗುರುತಿಸಿ ತಮ್ಮ ಕಚೇರಿಯಲ್ಲಿ ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಲು ಸಚಿವರು ಸೂಚನೆ ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ಚೀಕರಿಸಿದ ಸಚಿವರು, ತಮ್ಮ ಸ್ವ ಕ್ಷೇತ್ರದಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ಪೌರ ಕಾರ್ಮಿಕರಿಂದ ಧ್ವಜರೋಹಣ ಕಾರ್ಯ ನೆರವೇರಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು.
ಸಮಾರಂಭದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರ ಪುತ್ರಿ ಅನನ್ಯ ರಾವ್ ಅವರು ಪಾಲ್ಗೊಂಡು ಧ್ವಜವಂದನೆ ಸಲ್ಲಿಸಿದರು. ಧ್ವಜಾರೋಹಣದ ಬಳಿಕ ಪೌರ ಕಾರ್ಮಿಕರನ್ನ ಸನ್ಮಾನಿಸಿ, ಗೌರವಿಸಲಾಯಿತು.
ಸಂವಿಧಾನ ಭಾರತೀಯರ ಪವಿತ್ರ ಗ್ರಂಥ, ಅದನ್ನು ತಿರುಚಲು ಅವಕಾಶ ನೀಡಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್
BIG NEWS : ಬಿಜೆಪಿ ಜೆಡಿಎಸ್ ನಿಂದ 30 ಜನ ಬರ್ತಾರೆ : ಸ್ಪೋಟಕ ಹೇಳಿಕೆ ನೀಡಿದ ಸಚಿವ ಚೆಲುವರಾಯಸ್ವಾಮಿ