ಬೆಂಗಳೂರು : ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲವೆಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ್ದ ಜಗದೀಶ್ ಶೆಟ್ಟರ್ ಅವರು ನಿನ್ನೆ ಪುನಃ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಈ ವಿಷಯದ ಕುರಿತಾಗಿ ರಾಜ್ಯ ಕಾಂಗ್ರೆಸ್ನ ಹಲವು ನಾಯಕರು ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶೆಟ್ಟರಿಂದ ನಮಗೇನು ಲಾಭವಿಲ್ಲ
ಶೆಟ್ಟರಿಂದ ನಮಗೆ ಲಾಭನು ಇಲ್ಲ ನಷ್ಟಾನು ಇಲ್ಲ. ನನಗೆ ನೋವಾಗಿದೆ ಎಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದರು. ಚುನಾವಣೆಯಲ್ಲಿ ಸೋತರೂ ಕೂಡ ಅವರನ್ನು ಎಂಎಲ್ಸಿ ಮಾಡಿದ್ದೇವೆ ಇಷ್ಟೆಲ್ಲಾ ಮಾಡಿದ್ರೂ ಸಹ ವಾಪಸ್ ಬಿಜೆಪಿಗೆ ಹೋಗಿದ್ದಾರೆ. ಇದನ್ನು ರಾಜ್ಯದ ಜನತೆಯ ಆದೇಶಕ್ಕೆ ಬಿಡೋಣ. ಎಂದು ಮಂಡ್ಯದಲ್ಲಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.ಲಕ್ಷ್ಮಣ ಸವದಿಯವರು ಮತ್ತೆ ಬಿಜೆಪಿಗೆ ಹೋಗಲ್ಲ ಸವದಿ ನನಗೆ ಒಳ್ಳೆ ಸ್ನೇಹಿತರು ಅವರು ಹೋಗಲ್ಲ ಬಿಜೆಪಿಯವರು ಎಲ್ಲರ ಮೇಲು ಒತ್ತಡ ಹಾಕುತ್ತಾರೆ ಎಂದು ಸಚಿವ ಎನ್ ಚೆಲುವರಾಯಸ್ವಾಮಿ ತಿಳಿಸಿದರು.
ಇಡಿ-ಐಟಿ ಭಯ ಇರಬೇಕು
ಜಗದೀಶ್ ಶೆಟ್ಟರ್ ಗೆ ಇಡಿ ಅಥವಾ ಐಟಿ ಭಯ ಇರಬೇಕು ಎಂದು ಸಚಿವ ಆರ್ ಬಿ ತಿಮ್ಮಾಪುರ್ ಬಾಗಲಕೋಟೆಯಲ್ಲಿ ತಿಳಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ಯಾಕೆ ಪುನಹ ಬಿಜೆಪಿಗೆ ಹೋಗಿದ್ಯಾಕೆ? ಅಂತ ಅವರೇ ಹೇಳಬೇಕು ಏಕೆ ಹೋದರು ಎಂದು ಶಟ್ಟರ ಜನರಿಗೆ ತಿಳಿಸಬೇಕು. ಸವದಿ ಬಿಜೆಪಿಗೆ ಹೋಗುತ್ತಾರೆ ಅನ್ನೋದು ಊಹಾಪೋಹವಾಗಿದೆ ಎಂದು ಬಾಗಲಕೋಟೆಯಲ್ಲಿ ಸಚಿವ ಆರ್ ಬಿ ತಿಮ್ಮಪ್ಪರು ತಿಳಿಸಿದರು.
ಸವದಿ ಹೋಗಲ್ಲ
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದಾಗ ಬಲ ಹೆಚ್ಚಿಲ್ಲ. ಎಂದು ಚಿತ್ರದುರ್ಗ ನಗರದಲ್ಲಿ ಸಚಿವ ಡಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು ಶಾಸಕ ಲಕ್ಷ್ಮಣ ಸವದಿ ನನ್ನ ಆತ್ಮೀಯ ಸ್ನೇಹಿತರು ನಾನು ಸವದಿ ಜೊತೆ ಸುಧೀರ್ಘವಾಗಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಸವದಿ ಕಾಂಗ್ರೆಸ್ ತೊರೆಯಲ್ಲಾ ಎಂದು ಸಚಿವ ಡಿ ಸುಧಾಕರ್ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಸಮುದ್ರವಿದ್ದಂತೆ
ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ಶೆಟ್ಟರ್ ಹೋಗಿದ್ದಕ್ಕೆ ಏನೂ ಹೆಚ್ಚು ಕಡಿಮೆ ಆಗಿಲ್ಲ. ಎಂದು ಗದಗ ನಗರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು ತತ್ವ ಸಿದ್ಧಾಂತ ಜನಪದ ಕಾರ್ಯಕ್ರಮದ ಮೂಲಕ ಸಂಘಟನೆಗೆ ಶಕ್ತಿ ಬಂದಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕ್ರಾಂತಿಕಾರಕ ಬದಲಾವಣೆ ತಂದಿದೆ. ನಮ್ಮನ್ನು ನೋಡಿ ಮೋದಿ ಕೂಡ ಗ್ಯಾರಂಟಿ ಅನ್ನೋದಕ್ಕೆ ಆರಂಭಿಸಿದ್ದಾರೆ ಯಾರೋ ಒಬ್ಬರು ಹೋಗಿದ್ದಕ್ಕೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದಿಲ್ಲ ಶೆಟ್ಟರ್ ಜಂಟಲ್ ಮ್ಯಾನ್ ಅಂತ ನಾವು ಕಾಂಗ್ರೆಸ್ಸಿಗೆ ಸ್ವಾಗತಿಸಿದ್ವೆ ಚುನಾವಣೆಯಲ್ಲಿ ಸೋತರೂ ಕೂಡ ಶೆಟ್ಟರ್ ಅವರನ್ನು ಎಂಎಲ್‌ಸಿ ಮಾಡಿದ್ವಿ ಯಾವುದೇ ವರ್ಗ ಜಾತಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.