ಮಹಾರಾಷ್ಟ್ರ : ಮಹಾರಾಷ್ಟ್ರದ ಮುಂಬೈನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮುಂಜಾನೆ ಮುಂಬೈನ ಗ್ರಾಂಟ್ ರಸ್ತೆಯ ಕಮಾತಿಪುರದ ರೆಸ್ಟೋರೆಂಟ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕ ಬೆಂಕಿಯಿಂದ ರೆಸ್ಟೋರೆಂಟ್ ಒಂದು ಹೊತ್ತಿ ಉರಿದಿರುವ ಘಟನೆ ನಡೆದಿದ್ದು ಓರ್ವ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ನಂತರ 16 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಒಟ್ಟು 16 ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಬೆಂಕಿಯ ಕಾರಣ, ಹತ್ತಿರದ ಮಾಲ್ ಮತ್ತು ಬಹುಮಹಡಿ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಇಲ್ಲಿಯವರೆಗೆ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಮುಂಬೈ ಅಗ್ನಿಶಾಮಕ ಸೇವೆ ತಿಳಿಸಿದೆ.
ಘಟನೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಸುಟ್ಟ ದೇಹವು ಆವರಣದಲ್ಲಿನ ಸ್ನಾನಗೃಹದಲ್ಲಿ ಕಂಡುಬಂದಿದೆ, ಯಾವುದೇ ಗಾಯಾಳು ಅಥವಾ ಕಾಣೆಯಾದ ವ್ಯಕ್ತಿಯ ಬಗ್ಗೆ ವಿಚಾರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | Mumbai, Maharashtra: A lever-4 fire broke out at a restaurant in Kamathipura, Grant Road at 2 am. A total of 16 fire engines and 2 lines from a high-rise building are in operation. Due to flames, a nearby mall and a high-rise building have been vacated. No injuries have… https://t.co/3ibZ35kDRN pic.twitter.com/d61kyPUt3f
— ANI (@ANI) January 26, 2024