ಮಂಡ್ಯ: ಜಿಲ್ಲೆಯಲ್ಲಿ ಹೊಟ್ಟೆ ಕಿಚ್ಚಿಗೆ ಬೆಳಎದು ನಿಂತಿದ್ದಂತ ಅಡಿಕೆ ಹಾಗೂ ತೆಂಗು ಸಸಿಗಳನ್ನೇ ಕಿಡಿಗೇಡಿಗಳು ಕಡಿದು ಹಾಕಿರೋ ಘಟನೆ ನಡೆದಿದೆ. ಈಗ ದುಷ್ಕರ್ಮಿಗಳ ಕಿಡಿಗೇಡಿ ಕೃತ್ಯಕ್ಕೆ ಅನ್ನದಾತ ಆಘಾತಕ್ಕೆ ಒಳಗಾಗಿದ್ದಾನೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಹೊಟ್ಟೆಕಿಚ್ಚಿಗೆ ಬೆಳೆದು ನಿಂತ ಅಡಿಕೆ ಮತ್ತು ತೆಂಗು ಸಸಿಗಳಿಗೆ ಮಚ್ಚು ಬೀಸಲಾಗಿದೆ. ಆಳೆತ್ತರ ಬೆಳೆದ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ನಾಗಮಂಗಲ ತಾಲ್ಲೂಕಿನ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್ ಎಂಬ ರೈತನ ಜಮೀನಿನಲ್ಲಿ ಕೃತ್ಯ ಎಸಗಲಾಗಿದೆ. 2 ತೆಂಗಿನ ಗಿಡ 39 ಅಡಿಕೆ ಸಸಿಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ರೈತ ಶ್ರೀನಿವಾಸ್ ಸಹೋದರ ಕೃಷ್ಣೇಗೌಡರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಮತ್ತೊಂದು ಗುಡ್ನ್ಯೂಸ್: ‘ಪ್ರಭಾರ ಭತ್ಯೆ’ ಹೆಚ್ಚಿಸಿ ಸರ್ಕಾರ ಆದೇಶ