ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರಕರಣಗಳನ್ನು ತಡೆಯೋದಕ್ಕೆ ಪೊಲೀಸ್ ಇಲಾಖೆ ಈಗ ಮಹತ್ವದ ಕ್ರಮ ವಹಿಸಿದೆ. ಅದಕ್ಕಾಗಿ ರಾಜ್ಯದ ಎಲ್ಲಾ ಪೊಲೀಸರಿಗೂ ತರಬೇತಿಯನ್ನು ನೀಡಲಾಗುತ್ತಿದೆ.
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಭೆ ಬಳಿಕ ಮಾತನಾಡಿದಂತ ಡಿಜಿಐಜಿಪಿ ಅಲೋಕ್ ಮೋಹನ್ ಅವರು, ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ರಿವ್ಯೂ ಮಾಡ್ತಾ ಇದ್ದಿನಿ. ಸೈಬರ್ ಕ್ರೈಮ್, ಬೀಟ್ ಸಿಸ್ಟಮ್, ಕೆಲ ಪ್ರಕರಣಗಳ ತನಿಖೆ ಮಾಹಿತಿ ಪಡೆಯಲಾಗಿದೆ ಎಂದರು.
ಸೈಬರ್ ಕ್ರೈಮ್ ಪ್ರಕರಣಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದಿದ್ದೇನೆ. ಸೈಬರ್ ಕ್ರೈಮ್ ತನಿಖಾ ವಿಧಾನ ಬಗ್ಗೆ ಎಲ್ಲಾರಿಗೂ ತರಬೇರಿ ನೀಡಬೇಕು. ಜಿಲ್ಲೆಗಳಲ್ಲಿ, ಮತ್ತು ಸಿಐಡಿ ಕಚೇರಿಯಲ್ಲಿ ಸೈಬರ್ ಕ್ರೈಮ್ ತನಿಖೆ ತರಬೇತಿ ನೀಡುತ್ತಿದ್ದೇವೆ. ಡ್ರಗ್ಸ್ ಮುಕ್ತ ಮಾಡಬೇಕು ಅಂತ ಹೇಳಿದ್ದಿನಿ. ಬೆಂಗಳೂರು ನಗರದಲ್ಲಿ 100 ಕೋಟಿಗೂ ಹೆಚ್ಚು ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಎಲ್ಲಾ ಕಡೆ ಸಭೆ ಮಾಡ್ತಾ ಇದ್ದಿನಿ. ಜಿಲ್ಲೆಗಳಲ್ಲಿ, ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ಮಾಡ್ತಾ ಇದ್ದಿನಿ. ಬೆಂಗಳೂರಿನಲ್ಲಿ ಕುಳಿತುಕೊಂಡು ಕೆಲಸ ಮಾಡಲ್ಲ. ಎಲ್ಲಾ ಕಡೆ ಹೋಗ್ತೀನಿ ಕೆಲಸ ಮಾಡ್ತೀನಿ. ಮೇಲಿಂದ ಮೇಲೆ ಸಭೆ ಮಾಡಿ ಸಲಹೆ ಸೂಚನೆ ಗಳನ್ನು ನೀಡ್ತಾ ಇದ್ದಿನಿ ಎಂದರು.
ಸೈಬರ್ ಕ್ರೈಮ್ ಮತ್ತು ಡ್ರಗ್ಸ್ ಪ್ರಮುಖ ವಾಗಿ ಚರ್ಚೆ ನಡೆಸಲಾಗಿದೆ. ಹೆಚ್ಚು ಕೇಸ್ ಗಳು ದಾಖಲಾಗುತ್ತಿದೆ. ಯಾವ ಕಡೆ ಹೆಚ್ಚು ಕೇಸ್ ಗಳು ಆಗ್ತಾ ಇದೆ ಅಲ್ಲಿ ಹೆಚ್ಚು ಅಧಿಕಾರಿಗಳನ್ನ ನೇಮಕ ಮಾಡಕ್ಕೆ ಮಾಡಲಾಗಿದೆ. ಸೈಬರ್ ಕ್ರೈಮ್ ನಲ್ಲಿ ಶಿಕ್ಷೆ ಪ್ರಮಾಣ ಹೆಚ್ಚು ಮಾಡಬೇಕು ಅದಕ್ಕೆ ಅಡಿಷನಲ್ Dcp ಗಳನ್ನ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಆರು ತಿಂಗಳಲ್ಲಿ ಎಲ್ಲಾ ಪೊಲೀಸರು ಸೈಬರ್ ಕ್ರೈಮ್ ಬಗ್ಗೆ ವಿಶೇಷ ತರಬೇತಿ ಪಡೆಯುತ್ತಾರೆ. ಎಲ್ಲಾ ಕಡೆ ನಮ್ಮಪೊಲೀಸರು ತರಬೇತಿ ಪಡೆಯುವಂತೆ ಸೂಚನೆ ನೀಡಲಾಗುತ್ತದೆ. ಸೈಬರ್ ಕ್ರೈಮ್‌ನಲ್ಲಿ ತನಿಖೆ ಮಾಡಬೇಕು. ಅದಕ್ಕೆ ವಿಶೇಷ ತರಬೇತಿ ಬೇಕು. ಹೊರ ರಾಜ್ಯಗಳಲ್ಲಿ ಆರೋಪಿಗಳನ್ನು ಬಂದಿಸಲು ಹೋದಾಗ ಸಾಕ್ಷ್ಯಿ ಸಮೇತ ಅರೆಸ್ಟ್ ಮಾಡಬೇಕು ಎಂದರು.
BREAKING: ‘2023ರ ಐಸಿಸಿ ವರ್ಷದ ಪುರುಷರ ಏಕದಿನ ಕ್ರಿಕೆಟರ್ ಪ್ರಶಸ್ತಿ’ಗೆ ‘ವಿರಾಟ್ ಕೊಹ್ಲಿ’ ಭಾಜನ | Virat Kohli
ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ: ಜೆಡಿಎಸ್-ಬಿಜೆಪಿ ನಾಯಕರಿಗೆ ‘ಶಾಕ್‌ಕೊಟ್ಟ’ ಸಂಸದೆ ಸುಮಲತಾ ಅಂಬರೀಶ್