ಬೆಂಗಳೂರು : ಕೆಐಡಿಬಿ ಜಾಗದಲ್ಲಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಡುಬಿಸನಹಳ್ಳಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳನ್ನು ಜೆಸಿಬಿ ಮುಖಾಂತರ ನೆಲಸಮಗೊಳಿಸಲಾಗಿದೆ. ಆದರೆ ಮನೆಯಲ್ಲಿ ವಾಸಿಸುತ್ತಿದ್ದ ಜನರಿಗೆ ಯಾವುದೇ ರೀತಿಯಾದಂತಹ ಪರಿಹಾರ ಕೊಡದೆ ಹಾಗೂ ನೋಟಿಸ್ ನೀಡದೆ ಈ ರೀತಿ ಏಕಾಏಕಿ ಬಂದು ಜೆಸಿಬಿಯಿಂದ ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಮನೆಗಳು ನೆಲಸಮ ಮಾಡುತ್ತಿರುವುದಕ್ಕೆ ನಿವಾಸಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಧಿಕಾರಿಗಳ ನಡೆಗೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ಮೇಲೆ ದೌರ್ಜನ್ಯ ಮಾಡಬೇಡಿ ಅಂತ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಮನೆಗಳ ನೆಲಸಮ ಮಾಡಲಾಗಿದೆ.
ಸ್ಥಳದಲ್ಲಿ ಯಾವುದೇ ರೀತಿಯಾಗಿ ಅಹಿತಕರ ಘಟನೆ ನಡೆದಂತೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿತ್ತು ನೆಲಸಮಗೊಳಿಸುವ ಕಾಡುಬಿಸನಹಳ್ಳಿ ಪ್ರದೇಶ ನಲ್ಲಿ ಇದು ಕೆ ಐ ಡಿ ಬಿ ಗೆ ಸೇರಿರುವ ಪ್ರದೇಶವಾಗಿದೆ ಎಂದು ಹೇಳಲಾಗುತ್ತಿದೆ.
ನಮಗೆ ಒಂದು ನೋಟಿಸ್ ಬಂದಿಲ್ಲ ತಕ್ಷಣ ಬಂದು ಎಲ್ಲರೂ ಬಡವರು ಇರುವುದು ಹೊಡೆದು ಬಿಟ್ಟು ಊಟ ಎಲ್ಲ ತಿಂದಿಲ್ಲ ಮಕ್ಕಳಲ್ಲ ಏಟು ಬಿದ್ದು ರೋಡಿಗೆ ಬಂದಿದ್ದಾರೆ ಈ ರೀತಿ ಮೂರು ವ್ಯಾನ್ ಪೊಲೀಸ್ ಬಿಟ್ಟು ಈ ರೀತಿ ಹೊಡೆಯುವುದು ನ್ಯಾಯಾನ ಪೂರ್ತಿಯಾಗಿ ಯಾರು ರಾಜಕೀಯ ಕುಮ್ಮಕ್ಕುನಿಂದ ನಡಿತಾ ಇದೆ.20 ವರ್ಷದಿಂದ ಈ ಮನೆಯಲ್ಲಿ ವಾಸವಾಗಿದ್ದೇವೆ. ಕೆಐಡಿಬಿ ಅವರು ದೌರ್ಜನ್ಯ ಮಾಡಿ ಜಾಗ ಕಿತ್ತುಕೊಂಡಿದ್ದಾರೆ ಆದರೆ ಯಾವುದೇ ರೀತಿಯಾಗಿ ನೋಟಿಸ್ ಕೊಟ್ಟಿಲ್ಲ ಯಾವುದೇ ರೀತಿಯಾಗಿ ಸ್ಥಳಾಂತರಕ್ಕೆ ಕಾಲವಕಾಶ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಕಿದ್ದಾರೆ.