ಬೆಂಗಳೂರು : ಬಿಗ್ ಬಾಸ್ ಸ್ಪರ್ಧೆ ಡ್ರೋಣ್ ಪ್ರತಾಪ್ ವಿರುದ್ಧ ಇದೀಗ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದ್ದು ಮಹಾರಾಷ್ಟ್ರ ಮೂಲದ ವ್ಯಕ್ತಿ ಒಬ್ಬರಿಂದ ಸುಮಾರು 35 ಲಕ್ಷ 75,000 ಹಣ ಪಡೆದು ಕ್ವಾಲಿಟಿ ಹಾಗೂ ಸರಿಯಾಗಿ ಕೆಲಸ ನಿರ್ವಹಿಸಿದಂತಹ ಡ್ರೋನ್ ಗಳನ್ನು ನೀಡಿ ಮೋಸ ಮಾಡಿದ್ದಾರೆ ಎಂದು ಬಿಸಿನೆಸ್ ಪಾರ್ಟ್ನರ್ ಸಾರಂಗ್ ಮಾನ್ ಎನ್ನುವವರು ಇದೀಗ ಗಂಭೀರವಾದ ಆರೋಪ ಮಾಡಿದ್ದಾರೆ.
ಬುಸಿನೆಸ್ ಪಾರ್ಟನರ್ ಸಾರಂಗ್ ಮಾನಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಲಕ್ಷ,ಲಕ್ಷ ಕೊಟ್ಟು ಡ್ರೋನ್ ತೆಗೆದುಕೊಂಡಿದ್ದು, ಕ್ವಾಲಿಟಿ ಇಲ್ಲದಿರುವದು ಎಂದು ಆರೋಪ ಮಾಡಲಾಗುತ್ತಿದೆ. ಎಂಟು ತಿಂಗಳ ಹಿಂದೆ ಪ್ರತಾಪ್ಗೆ 35, 75,000 ನೀಡಿದ್ದೆ ಎಂದು ಸಾರಂಗ ಮಾನ್ ಅವರು ಆರೋಪಿಸುತ್ತಿದ್ದಾರೆ.
ಹಣ ನೀಡಿದ ನಂತರ ಒತ್ತಾಯ. ಮಾಡಿದ ಮೇಲೆ ಎರಡು ತಿಂಗಳ ಬಳಿಕ 4 ಡ್ರೋನ್ ಗಳನ್ನು ಪ್ರತಾಪ್ ನೀಡಿದ್ದ ಆ ನಾಲ್ಕು ಡ್ರೋನ್ಗಳು ಕೆಲಸ ಮಾಡುತ್ತಿಲ್ಲ ಬ್ಯಾಟರಿ ಕೂಡ ಸರಿ ಇಲ್ಲ ಎಂದು ಸಾರಂಗ ಮಾನ್ ಅವರು ಆರೋಪ ಮಾಡುತ್ತಿದ್ದಾರೆ.
ಎಲ್ಲದಕ್ಕೂ ಒಟ್ಟು ಬಡ್ಡಿಗೆ ಹಣ ತಂದಿದ್ದು ಇವರಿಗೆ 83 ಲಕ್ಷ ಖರ್ಚಾಗಿದೆ ಎಂದು ಆರೋಪಿಸುತ್ತಿದ್ದಾರೆ .ಡ್ರೋನ್ ಹಾರ ಬೇಕಾದರೆ ಕೆಳಗೆ ಬಿದ್ದೋಗುತ್ತದೆ, ಬಡ್ಡಿಗೆ ಹಣ ತಂದಿದ್ದು ಇವರಿಗೆ 83 ಲಕ್ಷ ಖರ್ಚಾಗಿದೆ ಡ್ರೋನ್ ಪ್ರತಾಪ್ ನಿಂದ ಮೋಸವಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಫೆ.20ಕ್ಕೆ ಹಾಜರಾಗುವಂತೆ ಕೋರ್ಟ್ ನೋಟಿಸ್
ಅಲ್ಲದೆ ಕೋವಿಡ್ ಸಮಯದಲ್ಲಿ ಬಿಬಿಎಂಪಿ ನೋಡಲ್ ಅಧಿಕಾರಿ ಪ್ರಯಾಣ ಎನ್ನುವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಗಂಭೀರ ಆರೋಪ ಮಾಡಿದ್ದರು ಆದರೆ ಇದನ್ನು ನೋಡಲ್ ಅಧಿಕಾರಿ ಪ್ರಯಾಗ್ ತಳಿ ಹಾಕಿದ್ದು, ಪ್ರತಾಪ್ ವಿರುದ್ಧ ಕೋರ್ಟ್ ನಲ್ಲಿ ಮಾನ ನಷ್ಟ ಮುಖದಮ್ಮೆ ಹೂಡಿದರು ಇದೀಗ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ಕೋರ್ಟ್ ಫೆಬ್ರವರಿ 21ರಂದು ವಿಚಾರಣೆಗೆ ಹಾಜರಾಗುವಂತೆ ಡ್ರೋನ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.