ವಿಜಯಪುರ : ಇದೇ ಜನವರಿ 31ರಂದು ಹಿಂದುಳಿದ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗಡೆ ನಿವೃತ್ತಿಯಾಗಲಿದ್ದು ಒಂದು ವಾರದೊಳಗೆ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಇದಕ್ಕೆ ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ..
ಜಾತಿ ಗಣತಿ ವರದಿಗೆ ಬಿಜೆಪಿ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದು, ವರದಿ ಸಲ್ಲಿಕೆ ಮಾಡಬಾರದು ಎಂದು ಶಾಸಕ ಯತ್ನಾಳ್ ವಿರೋಧಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬಸನಗೌಡ ಪಾಟೀಲ ವರದಿ ಸಲ್ಲಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜಯಪ್ರಕಾಶ್ ಹೆಗಡೆಯವರ ವರದಿ ಅಪೂರ್ಣವಾದದ್ದು ವರದಿಯ ಮೂಲ ಪ್ರತಿ ಕಳುವಾಗಿದ್ದರೂ ಕೂಡ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ತರಾತುರಿಯಲ್ಲಿ ಹೊರಗಿನ ಸಲ್ಲಿಸಲು ಆಯೋಗ ಸಿದ್ದತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ 70% ಭಾಗಗಳಲ್ಲಿ ಜಾತಿ ಗಣತಿ ವರದಿಗಾಗಿ ಸಮೀಕ್ಷೆಯೇ ನಡೆದಿಲ್ಲವೆಂದು ಹಲವಾರು ಜನಪ್ರತಿನಿಧಿಗಳು, ಸಾರ್ವಜನಿಕರು ಹೇಳಿದ್ದರೂ ಹಾಗು ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಈ ವರದಿಯನ್ನು ಅವೈಜ್ಞಾನಿಕವೆಂದು ಜರದಿದ್ದರೂ ಸಿದ್ದರಾಮಯ್ಯನವರಿಗೆ ಈ ತರಾತುರಿ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂತರಾಜು ಅಲಿಯಾಸ್ ಜಯಪ್ರಕಾಶ್ ಹೆಗ್ಡೆಯವರ ಜಾತಿಗಣತಿ ವರದಿ ಅಪೂರ್ಣವಾದುದು ಹಾಗು ವರದಿಯ ಮೂಲಪ್ರತಿಯೇ ಕಳವಾಗಿದ್ದರೂ ವರದಿಯನ್ನು ತರಾತುರಿಯಲ್ಲಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗ ತಯಾರಿ ನಡೆಸಿದೆ. ಮೂಲ ಪ್ರತಿಯೇ ಇಲ್ಲದ ವರದಿಯ ನೈಜತೆಯನ್ನು ಧೃಡೀಕರಿಸುವವರು ಯಾರು ಇಲ್ಲದಿದ್ದರೂ ಸಿದ್ದರಾಮಯ್ಯನವರ ಒತ್ತಡಕ್ಕೆ ಈ ವರದಿಯನ್ನು ಸಲ್ಲಿಸಲಾಗುತ್ತಿದೆ.
ಕಾಂತರಾಜು ಅಲಿಯಾಸ್ ಜಯಪ್ರಕಾಶ್ ಹೆಗ್ಡೆಯವರ ಜಾತಿಗಣತಿ ವರದಿ ಅಪೂರ್ಣವಾದುದು ಹಾಗು ವರದಿಯ ಮೂಲಪ್ರತಿಯೇ ಕಳವಾಗಿದ್ದರೂ ವರದಿಯನ್ನು ತರಾತುರಿಯಲ್ಲಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗ ತಯಾರಿ ನಡೆಸಿದೆ.
ಮೂಲಪ್ರತಿಯೇ ಇಲ್ಲದ ವರದಿಯ ನೈಜತೆಯನ್ನು ಧೃಡೀಕರಿಸುವವರು ಯಾರು ಇಲ್ಲದಿದ್ದರೂ ಸಿದ್ದರಾಮಯ್ಯನವರ ಒತ್ತಡಕ್ಕೆ ಈ ವರದಿಯನ್ನು…
— Basanagouda R Patil (Yatnal) (@BasanagoudaBJP) January 24, 2024