ಬೆಂಗಳೂರು: ನಗರದಲ್ಲಿನ ಪ್ರೀ ಸ್ಕೂಲ್ ಒಂದರಲ್ಲಿ ನಡೆದಂತ ನಿರ್ಲಕ್ಷ್ಯ ಘಟನೆಯಿಂದಾಗಿ 4 ವರ್ಷದ ಪುಟ್ಟ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವಂತೆ ಆಗಿದೆ. ಈಗ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬೆಂಗಳೂರಿನ ಹೆಣ್ಣೂರಿನ ಚೆಲ್ಲಕೆರೆಯಲ್ಲಿನ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ 4 ವರ್ಷದ ಜಿನಾ ಓದುತ್ತಿದ್ದಳು. ಜನವರಿ.22ರಂದು 3ನೇ ಮಹಡಿಯಿಂದ ಬಿದ್ದಿದ್ದಂತ ಜಿನಾಗೆ ತಲೆಗೆ ತೀವ್ರವಾಗಿ ಪೆಟ್ಟಾಗಿ ಗಾಯ ಕೂಡ ಆಗಿತ್ತು.
ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ 4 ವರ್ಷದ ಜಿನಾ ಸ್ಥಿತಿ ಚಿಂತಾಜನಕವಾಗಿರೋದಾಗಿ ತಿಳಿದು ಬಂದಿದೆ.
ಜಿನಾ ಇಷ್ಟು ತೀವ್ರವಾಗಿ ಗಾಯಗೊಂಡರೂ ಹೆಣ್ಣೂರು ಠಾಣೆಯ ಪೊಲೀಸರು ಮಾತ್ರ ಎಫ್ಐಆರ್ ದಾಖಲಿಸಿ, ಪ್ರೀ ಸ್ಕೂಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋ ಬದಲಾಗಿ, ಎನ್ ಸಿಆರ್ ಹಾಕಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
BIG NEWS: ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್: ವಾರದೊಳಗೆ ‘ಬರ ಪರಿಹಾರ’ದ ಮೊದಲ ಕಂತು ಬಿಡುಗಡೆ- ಸಿಎಂ ಸಿದ್ಧರಾಮಯ್ಯ
BREAKING : ಇಂಡಿಯಾ ಮೈತ್ರಿಕೂಟಕ್ಕೆ ಬಿಗ್ ಶಾಕ್ : ಪಂಜಾಬ್’ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ‘AAP’ ಘೋಷಣೆ