ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 161 ಮಂದಿಗೆ ಕೊರೋನಾ ಪಾಸಿಟಿವ್ ( Corona Positve ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಓರ್ವ ಸಾವನ್ನಪ್ಪಿದ್ದಾನೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು ಕಳೆದ 24 ಗಂಟೆಯಲ್ಲಿ RTPCR ಮೂಲಕ 4022, RAT ಮೂಲಕ 945 ಸೇರಿದಂತೆ 4967 ಮಂದಿಯನ್ನು ಕೊರೋನಾ ಸೋಂಕು ( Coronavirus ) ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದೆ.
ಇಂದು ನಡೆಸಿದಂತ ಕೊರೋನಾ ಸೋಂಕು ಪತ್ತೆ ಪರೀಕ್ಷೆಯಲ್ಲಿ ಬಳ್ಳಾರಿಯಲ್ಲಿ 06, ಬೆಳಗಾವಿ 01, ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 79, ಚಾಮರಾಜನಗರ 01, ಚಿಕ್ಕಬಳ್ಳಾಪುರ 02, ಚಿಕ್ಕಮಗಳೂರು 15, ದಕ್ಷಿಣ ಕನ್ನಡ 03, ದಾವಣಗೆರೆ 01, ಧಾರವಾಡ 08, ಹಾಸನ 03, ಕೋಲಾರ 02, ಕೊಪ್ಪಳ 05, ಮೈಸೂರು 08, ರಾಯಚೂರು 03, ಶಿವಮೊಗ್ಗ 02, ತುಮಕೂರು 03, ಉಡುಪಿ 01, ಉತ್ತರ ಕನ್ನಡ 03, ವಿಜಯನಗರ 08 ಸೇರಿದಂತೆ 161 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ 129 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 528 ಆಗಿದೆ. ಇಂದು ಮೈಸೂರಿನಲ್ಲಿ ಓರ್ವ ಕೋವಿಡ್ ಸೋಂಕಿತ ( Covid19 Case ) ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
Ayodhya Temple: ಅಯೋಧ್ಯೆ ರಾಮನಲ್ಲಿ ಕ್ಷಮೆಯಾಚಿಸುತ್ತೇನೆ: ಪ್ರಾಣ ಪ್ರತಿಷ್ಠಾ ಬಳಿಕ ಪ್ರಧಾನಿ ಮೋದಿ ಹೇಳಿಕೆ
‘ಭಾರತೀಯ ಮುಸ್ಲಿಮರನ್ನ ಪ್ರಚೋದಿಸುವ ಪ್ರಯತ್ನ’ : ರಾಮ ಮಂದಿರ ನಿರ್ಮಾಣಕ್ಕೆ ‘ಪಾಕ್’ ಖಂಡನೆ, ‘ಭಾರತ’ ತರಾಟೆ