ಮನೆಯಿಂದ ಹೊರ ಹೋದಾಗ, ಟ್ರಿಪ್ ಹೊರಟಾಗ ಹೆಚ್ಚಿನವರು ಅಂಗಡಿಗಳಲ್ಲಿ ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸುತ್ತಾರೆ. ಜೊತೆಗೆ ಮನೆಯಲ್ಲೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿಟ್ಟು ಕುಡಿಯುತ್ತೇವೆ. ಹೀಗೆ ನೀವು ಯಾವಾಗಲೂ ನೀರನ್ನು ಖರೀದಿಸಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಸೇವನೆ ಮಾಡ್ತೀರಾ, ಹಾಗಾದರೆ ಇಲ್ಲಿದೆ ಅಚ್ಚರಿಯ ವಿಷಯ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಪ್ಲಾಸ್ಟಿಕ್ ಬಾಟಲಿ ಕುರಿತು ನಡೆಸಿದ ಅಧ್ಯಯನ ವರದಿ ಬೆಚ್ಚಿ ಬೀಳಿಸುತ್ತಿದೆ. ನಾವು ಕುಡಿಯುವ 1 ಲೀಟರ್ ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಬರೋಬ್ಬರಿ 2.4 ಲಕ್ಷ ಪ್ಲಾಸ್ಟಿಕ್ ಸೂಕ್ಷ್ಮ ತುಣುಕುಗಳಿವೆ. ಅಲ್ಲದೆ ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವುದರಿಂದ ಮನುಷ್ಯನ ದೇಹದೊಳಕ್ಕೆ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇರಿಕೊಳ್ಳುತ್ತದೆ ಎಂಬ ಸತ್ಯ ಕೂಡ ಬಯಲಾಗಿದೆ.
ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆಯಾಗಿದೆ. ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯನ ಜೀವಕೋಶಗಳ ಸೇರಲಿದೆ. ರಕ್ತಪ್ರವಾಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಹು ಅಂಗಾಗ ವೈಕಲ್ಯಗಳು ಸಂಭವಿಸಲಿದೆ. ಈ ಮೈಕ್ರೋಪ್ಲಾಸ್ಟಿಕ್ ಗರ್ಭದಲ್ಲಿರುವ ಮಗುವಿನ ದೇಹವನ್ನೂ ಸೇರುತ್ತದೆ. ತಾಯಿಯ ಹೊಕ್ಕಳ ಬಳ್ಳಿ ಮೂಲಕ ಮಗುವಿನ ದೇಹ ಸೇರಿ ಮಗುವಿನ ಆರೋಗ್ಯವನ್ನೂ ಏರುಪೇರು ಮಾಡಲಿದೆ. ಅಂದಹಾಗೆ ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋದನ್ನು ಈಗಾಗಲೇ ಹಲವು ವೈದ್ಯರು ಹೇಳಿದ್ದಾರೆ. ಇದೀಗ ಅಧ್ಯಯನ ವರದಿಯೂ ಇದೇ ಮಾತನ್ನು ಪುನರುಚ್ಚರಿಸಿದೆಯಾಗಿದೆ.