ನವದೆಹಲಿ: . ಕಳೆದ ಕೆಲವು ಗಂಟೆಗಳಿಂದ, ಅಯೋಧ್ಯೆಯ ಶ್ರೀ ರಾಮ್ ದೇವಾಲಯದ ವಿಗ್ರಹದ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತಿವೆ. ಜನವರಿ 22 ರಂದು ರಾಮ್ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮುನ್ನ ಮುಚ್ಚಿರುವ ಬಾಲ ರಾಮ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ. ಶ್ರೀರಾಮನ ಕಣ್ಣುಗಳು ಕಾಣುವ, ವೈರಲ್ ಆಗಿರುವ ವಿಗ್ರಹವು ನಿಜವಾದುಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಭಗವಾನ್ ರಾಮನ ವಿಗ್ರಹದ ಬಗ್ಗೆ, ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳುವ ಪ್ರಕಾರ, ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲು ಭಗವಾನ್ ರಾಮನ ವಿಗ್ರಹದ ಮೂರ್ತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ವೈರಲ್ ಆಗುತ್ತಿರುವ ಭಗವಾನ್ ರಾಮನ ವಿಗ್ರಹವು ನಿಜವಾದ ವಿಗ್ರಹವಲ್ಲ. ಒಂದು ವೇಳೆ ಈ ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬ ಬಗ್ಗೆ ತನಿಖೆ ನಡೆಯಬೇಕು ಅಂತ ಒತ್ತಾಯಸಿದ್ದಾರೆ.
#WATCH | Ayodhya: On the idol of Lord Ram, Shri Ram Janmabhoomi Teerth Kshetra Chief Priest Acharya Satyendra Das says, "…The eyes of Lord Ram's idol cannot be revealed before Pran Pratishtha is completed. The idol where the eyes of Lord Ram can be seen is not the real idol. If… pic.twitter.com/I0FjRfCQRp
— ANI (@ANI) January 20, 2024