ನವದೆಹಲಿ: 28 ವರ್ಷಗಳ ನಂತರ ಭಾರತವು 71 ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲು ಸಜ್ಜಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಮಿಸ್ ವರ್ಲ್ಡ್ ನ ಅಧಿಕೃತ ಪುಟವು ಎಕ್ಸ್ ನಲ್ಲಿ ಬರೆದುಕೊಂಡಿದೆ, “ಮಿಸ್ ವರ್ಲ್ಡ್ ನ ಅಧ್ಯಕ್ಷರಾದ ಜೂಲಿಯಾ ಮಾರ್ಲೆ ಸಿಬಿಇ ಅವರು ಭಾರತವನ್ನು ಮಿಸ್ ವರ್ಲ್ಡ್ ಗೆ ಆತಿಥ್ಯ ವಹಿಸುವ ದೇಶವೆಂದು ಹೆಮ್ಮೆಯಿಂದ ಘೋಷಿಸಿದಾಗ ಉತ್ಸಾಹವು ಗಾಳಿಯಲ್ಲಿ ತುಂಬುತ್ತದೆ. ಸೌಂದರ್ಯ, ವೈವಿಧ್ಯತೆ ಮತ್ತು ಸಬಲೀಕರಣದ ಆಚರಣೆ ಕಾಯುತ್ತಿದೆ. ಅದ್ಭುತ ಪ್ರಯಾಣಕ್ಕೆ ಸಿದ್ಧರಾಗಿ ಅಂತ ಹೇಳಿದೆ.
ಈ ಹಿಂದೆ 1996ರಲ್ಲಿ ಬೆಂಗಳೂರಿನಲ್ಲಿ ಈ ಸ್ಪರ್ಧೆ ನಡೆದಿತ್ತು. ರೀಟಾ ಫರಿಯಾ ಪೊವೆಲ್ 1966 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಶ್ವರ್ಯಾ ರೈ ಬಚ್ಚನ್ 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರೆ, ಡಯಾನಾ ಹೇಡನ್ 1997 ರಲ್ಲಿ ಕಿರೀಟವನ್ನು ಪಡೆದರು. ಯುಕ್ತಾ ಮುಖರ್ಜಿ 1999 ರಲ್ಲಿ ಭಾರತದ ನಾಲ್ಕನೇ ವಿಶ್ವ ಸುಂದರಿ ಮತ್ತು ಪ್ರಿಯಾಂಕಾ ಚೋಪ್ರಾ ಜೊನಾಸ್ 2000 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರು. ಮಾನುಷಿ ಚಿಲ್ಲರ್ 2017 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪಡೆದಿದ್ದಾರೆ.
ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಕೊನೆಯ ವಿಜೇತರಾಗಿದ್ದರು ಮತ್ತು ಈವೆಂಟ್ನ ಕೊನೆಯಲ್ಲಿ ಮುಂದಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
Chairman of Miss World, Julia Morley CBE stated "Excitement fills the air as we proudly announce India as the host country for Miss World. A celebration of beauty, diversity, and empowerment awaits. Get ready for a spectacular journey! 🇮🇳 #MissWorldIndia #BeautyWithAPurpose
— Miss World (@MissWorldLtd) January 19, 2024