ಬೆಂಗಳೂರು :ಹಾನಗಲ್ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಜನವರಿ 20ರಂದು ಹಾವೇರಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ ಅಂದು ಮಧ್ಯಾಹ್ನದ ಎಸ್ಪಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿದೆ.ಅಂದು ಮಧ್ಯಾಹ್ನ ಎಸ್ಪಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆಗೆ ನಿರ್ಧರಿಸಿದ್ದು, ಬಸವರಾಜ್ ಬೊಮ್ಮಾಯಿ ಆರ್ ಅಶೋಕ್ ಪ್ರತಿಭಟನೆಯ ನೇತೃತ್ವವನ್ನು ವಹಿಸಲಿದ್ದಾರೆ.
ಈ ಕುಡಿದಂತೆ ಬೆಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಕಾನೂನು ಸುವ್ಯವಸ್ಥೆಯಲ್ಲಿ ರಾಜಕಾರಣ ಮಧ್ಯ ಪ್ರವೇಶ ಮಾಡುತ್ತಿದೆ. ಪೋಕ್ಸೋ ಕಾಯ್ದೆ ಉಲ್ಲಂಘನೆ ಮಾಡಿದ್ದಲ್ಲದೆ ಸಂತ್ರಸ್ತೆಗೆ ಆಮಿಷ ಕೂಡ ಒಡ್ಡಲಾಗಿದೆ.ಸ್ಥಳೀಯ ಪೊಲೀಸರು ಮತ್ತು ಹಾಕುವಂತಹ ಎಲ್ಲಾ ಸಾಕ್ಷಿಗಳಿವೆ ಎಸ್ಐಟಿ ತನಿಖೆಗೆ ಸಿಎಂ ನಿರಾಕರಿಸಿ ಪ್ರೋತ್ಸಾಹ ಮಾಡಿದಂತೆ ಮಾಡಿದ್ದಾರೆ.ಹಾಗಾಗಿ ಜ.20 ರಂದು ಹಾವೇರಿ ಎಸ್ ಪಿ ಕಚೇರಿ ಮುಂದೆ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆಸಿದ್ದು ಹೆಚ್ಚು ಸೀಟು ಬಂದರೆ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಯತೀಂದ್ರ ಅವರು ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್ ಗೆ ಕಡಿಮೆ ಸೀಟು ಬಂದರೆ ಏನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಬರುವುದು ಬಿಜೆಪಿಗೆ ಯತೀಂದ್ರ ಪ್ರಕಾರ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುವುದಿಲ್ಲವೇ? ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯಿಂದ ಈಗ ಈ ಪ್ರಶ್ನೆ ಉದ್ಭವಿಸಿದೆ ಎಂದು ಅವರು ತಿಳಿಸದರು.
ಅತೃಪ್ತಿ ಶಮನಕ್ಕೆ 25 ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ಹೇಳಿದ್ದರು. ಈವರೆಗೂ ಅವರಿಗೆ ಅನುದಾನ ಕೊಟ್ಟಿಲ್ಲ.ಅವರ ಶಾಸಕರಿಗೆ ಅನುದಾನ ಕೊಟ್ಟರೆ ನಮ್ಮ ಶಾಸಕರಿಗೂ ಕೊಡಬೇಕು ನಾನು ಸಿ ಎಮ್ ಆಗಿದ್ದಾಗ 25 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇನೆ. ಹಾಗಾದರೆ ಎಷ್ಟು ಕೊಡಬೇಕು, ಕಾಂಗ್ರೆಸ್ ಶಾಸಕರಿಗೆ? ಎಂದು ಪ್ರಶ್ನಿಸಿದರು.
ಇವರ ಯೋಗ್ಯತೆಗೆ ಸಣ್ಣ ಬೋರ್ವೆಲ್ ಹಾಕಿಲ್ಲ ಎಲ್ಲಾ ವಿಚಾರಗಳನ್ನು ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದಾರೆ ಅನುದಾನ ಬಗ್ಗೆ ಕೇಂದ್ರದವರು ಚರಚಕ್ಕೆ ಬರಲಿ ಎಂಬ ಸವಾಲು ವಿಚಾರ ವಾಗಿ ಮಾತನಾಡಿದ ಅವರು ಅದು ಆಗದ ವಿಚಾರ ಎಂದು ಅವರಿಗೂ ಗೊತ್ತಿದೆ ಹಾಗಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.ಅವರು ಮೊದಲು ನಮ್ಮ ಐಟಿ ಸೆಲ್ ಹುಡುಗರ ಜೊತೆಗೆ ಚರ್ಚಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಲವು ವರ್ಷಗಳಿಂದ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಅವರು ಮಾತನಾಡಿದರೆ ಸರಿ ಬೇರೆಯವರು ಮಾತನಾಡಿದರೆ ತಪ್ಪು ಈ ಮೊದಲು ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು ಎಲ್ಲರಿಗೂ ಸಿಎಂ ಸಿದ್ದರಾಮಯ್ಯ ಏಕೋಶದಲ್ಲಿ ಮಾತನಾಡಿದ್ದಾರೆ ದೇವೇಗೌಡರಿಗೂ ಸಿದ್ದರಾಮಯ್ಯ ಏಕೋಶಣದಲ್ಲಿ ಮಾತನಾಡಿದ್ದಾರೆ ಅಂದು ಬೊಮ್ಮಾಯಿ ಹೇಳಿದರು.