ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳಲ್ಲಿ ಮೂವರು ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಶರಣಾಗುವ ಸಮಯವು ಜನವರಿ 21. ರಂದು ಕೊನೆಗೊಳ್ಳುವುದರಿಂದ ಅಪರಾಧಿಗಳ ವಕೀಲರು ತುರ್ತು ವಿಚಾರಣೆಗಾಗಿ ತಮ್ಮ ಮನವಿಯನ್ನು ಉಲ್ಲೇಖಿಸಿದ ನಂತರ ಸುಪ್ರೀಂ ಕೋರ್ಟ್ ಅವರ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿದೆ.