ಬೆಂಗಳೂರು : ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ ನಿಲ್ಲುತ್ತಿಲ್ಲ ಇದೀಗ ಮತ್ತೆ ಅವರ ಅಟ್ಟಹಾಸ ಮುಂದುವರೆದಿದ್ದು ಯುವತಿಯನ್ನು ಟಚ್ ಮಾಡಿ ಯುವಕನೋರ್ವ ವಿಕೃತಿ ಮೇರೆದಿದ್ದಾನೆ ಹೋಟೆಲ್ಗೆ ಬಂದಂತಹ ಯುವತಿಯ ಜೊತೆಗೆ ಗಲಾಟೆ ಕೂಡ ಆಗಿದ್ದು ವಿಜಯನಗರದ ನಮೂರ ಹೋಟೆಲ್ ನಲ್ಲಿ ಈ ದುರ್ಘಟನೆ ನಡೆದಿದೆ.
ಕಾಮುಕ ಯುವಕನೊಬ್ಬ ವಿಕೃತಿ ಮೆರೆದಿರುವ ಘಟನೆಯು ಸಿಸಿಟಿವಿಯಲ್ಲಿ ಕಾಮುಕನ ಕೃತ್ಯದ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ.ಯುವತಿನ ಟಚ್ ಮಾಡುವ ಮೊದಲೇ ಮೂವರು ಯುವಕರು ಪ್ಲಾನ್ ಮಾಡಿಕೊಂಡಿರುತ್ತಾರೆ. ಮೂವರಿಂದ ಈ ಕುರಿತು ಪ್ಲಾನ್ ಕೂಡ ನಡೆದಿರುತ್ತದೆ ಎನ್ನಲಾಗುತ್ತದೆ.
ಘಟನೆ ಸಂಭಂದ ಜನವರಿ 10ರಂದು ಈ ಕುರಿತು ವಿಜಯನಗರ ಠಾಣೆಯಲ್ಲಿ FIR ದಾಖಲಾಗಿದೆ. ಇದೀಗ ಆರೋಪಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಅಲ್ಲದೆ ಕಳೆದ ಬಾರಿ ಕೂಡ ಮಾಲ್ ಒಂದರಲ್ಲಿ ಯುವತಿಯ ಜೊತೆಗೆ ಹಿರಿಯ ನಾಗರಿಕರು ಒಬ್ಬರು ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿತ್ತು.
ಇದೀಗ ಮತ್ತೆ ಕಾಮುಕರು ವಿಕೃತಿ ಮೆರೆದಿದ್ದು ಯುವತಿಯನ್ನು ಟಚ್ ಮಾಡುವ ಮೂಲಕ ಅಸಭ್ಯ ವರ್ತನೆ ತೋರಿದ್ದಾರೆ. ತಕ್ಷಣ ಯುವತಿ ಯುವಕನ ಜೊತೆಗೆ ಕುಗಾಟ ಮಾಡಿ ಜಗಳ ಕೂಡ ನಡೆದಿದೆ.