ಚಿಕ್ಕಬಳ್ಳಾಪುರ: ಇತ್ತೀಚಿಗೆ ಗದಗನಲ್ಲಿ ಯಶ್ ಬರ್ತಡೇ ಕಟೌಟ್ ನಿಲ್ಲಿಸಲು ಹೋಗಿ ವಿದ್ಯುತ್ ಅಂತ ಬಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಇನ್ನು ಹಸಿರಾಗಿರುವಾಗಲೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್ಗೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ನಡೆದಿದೆ.
ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಈ ದುರ್ಘಟನೆ ನಡೆದಿದ್ದು, ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ (8) ಕರೆಂಟ್ ಶಾಕ್ನಿಂದ ಮೃತಪಟ್ಟಿದ್ದಾನೆ. ರಸ್ತೆ ದಾಟಲು ಹೋದ ಸಂದರ್ಭ ಟ್ರಾನ್ಸ್ಫಾರ್ಮರ್ ಗ್ರೌಂಡಿಂಗ್ ವೈರ್ನಿಂದ ವಿದ್ಯುತ್ ಶಾಕ್ ತಗುಲಿ ಬಾಲಕ ಕೊನೆಯುಸಿರೆಳೆದಿದ್ದಾನೆ.
ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್ಫಾರ್ಮರ್ ಬದಿಯಲ್ಲಿ ಹೋಗುವಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಕಳೆದ ವರ್ಷ ಬೆಂಗಳೂರಿನಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ತಾಯಿ ಮಗಳು ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ದುರಂತ ಸಾವನ್ನು ಕಂಡಿದ್ದರು ಅಲ್ಲದೆ ಇತ್ತೀಚಿಗೆ ಗದಗನಲ್ಲಿ ನಟ ಯಶ್ ಹುಟ್ಟುಹಬ್ಬದ ಅಂಗವಾಗಿ ಅವರ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಧಾರಣವಾಗಿ ಸಾವನಪ್ಪಿದ್ದರು ಆ ಘಟನೆ ಮಹಾಶಿವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ