ಬೆಳಗಾವಿ : ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯಾತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ. ರಾಮ ಮಂದಿರವನ್ನು ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳಿಸಿದ್ದೇವೆ, ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು. ಅಯೋಧ್ಯ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು.ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ ಎಂದರು
ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನ ಒಡೆದ್ರು. ಮರಾಠಿ, ಕನ್ನಡ ಒಂದಾಗ್ತಾರೆ ಅಂದ್ರೇ ಕತ್ತಿ ತಗೊಂಡು ಬರ್ತಾರೆ. ಈ ರೀತಿ ಒಡೆದು ಇಟ್ರೇ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ-ಕನ್ನಡ ಜಗಳ ಶುರುವಾಯಿತು. ಸ್ವಾತಂತ್ರ್ಯ ನಂತರ ಎಲ್ಲದರಲ್ಲೂ ನಮ್ಮನ್ನ ಒಡೆದ್ರು. ಇದನ್ನ ಹೊರತಾಗಿ ಒಟ್ಟಾಗಿ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು.
ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಏಳ್ತಾಯಿದೀವಿ ಅಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ ಎದ್ರೇ ಹೇಗಿರಬಹುದು. ಐನೂರು ವರ್ಷದ ಪಾಪವನ್ನ ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳಬೇಕು ಎಂದರು.
ಅಪಮಾನವನ್ನ ತೊಳೆದು ರಾಮ ಮಂದಿರ ಕಟ್ಟಲಾಗಿದೆ. ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೇ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯಾತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಂತ ಬಂದಿಲ್ಲ. ಬಿಜೆಪಿ ಗೆಲ್ಲಿಸಿ ಅಂತ ಹೇಳಲು ಬಂದಿದ್ದೇನೆ.ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ ಖಾನಾಪುರದಲ್ಲಿ ಸಂಸದರ ಕಚೇರಿ ತೆರೆಯಲು ಯೋಚನೆ ಮಾಡಿದ್ದೇವೆ.ಆದರೆ ಅಧಿಕಾರಿಗಳ ಸಭೆ ಕರೆಯಲು ಕೂಡ ನಮಗೆ ಅಧಿಕಾರ ಇಲ್ಲ ಎಂದು ಅವರು ತಿಳಿಸಿದರು.
ಈ ವೇಳೆ ಸಂಸದ ಅನಂತ್ ಕುಮಾರ್ ಹೆಗಡೆ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು ಆಗ ಕನ್ನಡದಲ್ಲಿ ಮಾತನಾಡಿ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದರು. ಎಲ್ಲರೂ ಹಿಂದಿ ಮರಾಠಿಯಲ್ಲಿ ಮಾತನಾಡಿದರೆ ಹೇಗೆ ಅಂತ ಕಾರ್ಯಕರ್ತರು ಪ್ರಶ್ನಿಸಿದರು? ನಾನು ಮೀಸೆಳ್ ಭಾಜಿ ರೀತಿ ಮಾತಾಡ್ತೀನಿ ಎಂದು ಅನಂತ್ ಕುಮಾರ್ ತಿಳಿಸಿದರು.
ಅಲ್ಲದೆ ಕಳೆದ ಹಲವು ವರ್ಷಗಳಿಂದ ಕಿತ್ತೂರು ಹಾಗೂ ಖಾನಾಪುರ ಎರಡು ವಿಧಾನಸಭಾ ಕ್ಷೇತ್ರಗಳನ್ನು ಕಾರವಾರಿಗೆ ಬಿಟ್ಟು ಕೊಡಿ ಎಂದು ಸಾಕಷ್ಟು ಬಾರಿ ನಾವು ಕೇಳಿದರೂ ಬೆಳಗಾವಿಯವರು ಬಿಟ್ಟುಕೊಟ್ಟಿಲ್ಲ ಎಂದು ಖಾನಾಪುರದಲ್ಲಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದರು.