ಉತ್ತರ ಕನ್ನಡ : ಜಿಲ್ಲೆಯ ಭಟ್ಕಳದ ದೇವಿ ನಗರ ಎಂಬ ಹೆಸರಿನ ನಾಮಫಲಕ ತೆರವು ಗೊಳಿಸಲು ಮದರಸಾದ ಗುರುಗಳಿಂದ ಒತ್ತಡದ ಹಿನ್ನಲೆಯಲ್ಲಿ ನಾಮಫಲಕ ತೆರವುಗೊಳಿಸಲಾಗಿದೆ. ಇದರಿಂದ ಕುಪಿತಾರ ಹಿಂದೂ ಕಾರ್ಯಕರ್ತರು, ಅನಧಿಕೃತ ಮಸೀದಿ ತೆರವಿಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ್ದಕ್ಕೆ ದುಬೈನಿಂದ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗಿದೆ.
ಜಾಲಿ ಪಟ್ಟಣದಲ್ಲಿ ಹಿಂದೂ ದೇವರ ಹೆಸರಿನಲ್ಲಿ ಇರುವ ದೇವಿ ನಗರ ಎಂಬ ಹೆಸರಿನ ನಾಮಫಲಕವನ್ನು ತೆರವು ಗೊಳಿಸಲು ಮದರಸಾದ ಗುರುಗಳಿಂದ ಒತ್ತಡ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ನಾಮಫಲಕ ತೆರವುಗೊಳಿಸಲಾಗಿದೆ. ನಾಮಫಲಕ ತೆರವಿಗೆ ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾದ ಹರೀಶ, ದೇಯಾ ಹಾಗೂ ಮಹೇಶ ಎಂಬವರಿಗೆ ದುಬೈನಿಂದ ವಿಡಿಯೋ ಮೂಲಕ ಬೆದರಿಕೆ ಹಾಕಲಾಗಿದೆ. ಭಟ್ಕಳದ ಜಾಲಿಯಲ್ಲಿ ಗುರುಗಳನ್ನು ಮುಟ್ಟಿದರೇ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಅವಾಚ್ಯ ಶಬ್ಧದಿಂದ ನಿಂದಿಸಿ ದಮ್ಕಿ ಹಾಕಲಾಗಿದೆ.
ಭಟ್ಕಳದ ಜಾಲಿ ಗ್ರಾಮದ ಮುಕ್ತಾರ್ ಮಹ್ಮದ್ ಕೊಟ್ಟಿಕೋಡಿ ಎಂಬಾತ ದಮ್ಕಿ ಹಾಕಿದ್ದಾಗಿ ಆರೋಪಿಸಿ ಹಿಂದೂ ಕಾರ್ಯಕರ್ತರು ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಸೆಕ್ಷನ್ 504, 506, 507 ರ ಅಡಿ ಪ್ರಕರಣ ದಾಖಲಾಗಿದೆ.