ಬೆಂಗಳೂರು: ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ಗೆ ಲಘು ಹೃದಯಾಘಾತವಾಗಿದೆ. ನಿನ್ನೆ ಸಂಜೆ ಮನೆಯಲ್ಲಿ ಜಿಮ್ ಮಾಡುತ್ತಿದ್ದಾಗ ಲಘು ಹೃದಯಾಘಾತವಾಗಿದ್ದು, ಶಾಸಕರನ್ನು ಕೂಡಲೇ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯರು ಸದ್ಯ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುತ್ತಿದ್ದು, ಶಾಸಕರು ಅಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚಿಗೆ ವಯಸ್ಸಿನ ಅಂತರವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಹೃದಯಾಘಾತ ಪ್ರಕರಣಗಳು ಸಾಮಾನ್ಯವಾಗಿವೆ.
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಗೆ ಚಿಕಿತ್ಸೆ ಮುಂದುವರೆದಿದ್ದು ಸದ್ಯ ಆರಗದಲ್ಲಿ ಸುಧಾರಣೆ ಕಂಡಿದ್ದು ಯಾವುದೇ ರೀತಿಯಾದಂತಹ ಸಮಸ್ಯೆ ಇಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ನಟ ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ ಹಾಗೂ ಇತ್ತೀಚಿಗೆ ನಟ ವಿಜಯ ರಾಘವೇಂದ್ರ ಅವರ ಪತ್ನಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಹಾರದ ಕ್ರಮ ಹಾಗೂ ಅವಶ್ಯಕತೆಗೂ ಮೀರಿ ವ್ಯಯಮ ಮಾಡುವುದರಿಂದ ಹೃದಯಘಾತಗಳು ಸಂಭವಿಸುತ್ತವೆ.