ಬೆಂಗಳೂರು : ಸಿಎಂ ಕಾರ್ಯದರ್ಶಿಯ ಪಿಎ ಎಂದು ಹೇಳುವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿಯನ್ನ ವಿಕ್ರಂ ಗೋಪಾಲಸ್ವಾಮಿ ಎಂದು ಹೇಳಲಾಗುತ್ತಿದೆ. ಸಿಎಂ ಕಾರ್ಯದರ್ಶಿ ಪಿಎ ಎಂದು ಹೇಳಿ ಮಹಿಳಾಧಿಕಾರಿ ಕುರಿತು ಮಾಹಿತಿ ಗಳಿಸಿದ್ದಾನೆ. ಪೊಲೀಸರಿಂದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.
ಆರೋಪಿಯೂ ಕಂದಾಯ ಅಧಿಕಾರಿ ಚಲನವಲನವನ್ನು ಗಮನಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಸಿಎಂ ಕಾರ್ಯದರ್ಶಿ, ಪಿಎ ಕಂದಾಯ ಸಚಿವರ ಪಿಎ ಎಂದು ಆರೋಪಿ ಹೇಳಿದ್ದ. ಡಿಜಿ ಕಚೇರಿ, ಕಮಿಷನರ್ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಕಚೇರಿಗೆ ಕರೆ ಮಾಡಿ ಅಧಿಕಾರಿಗಳ ವಿವರ ಕೇಳಿದ ವಿಕ್ರಂ ಗೋಪಾಲಸ್ವಾಮಿ ಕಂದಾಯ ಇಲಾಖೆ ಬಹಳ ಅಧಿಕಾರಿ ಬಗ್ಗೆ ಆಸಾಮಿ ವಿವರ ಕೇಳಿದ ಎನ್ನಲಾಗುತ್ತಿದ್ದು, ವಿಚಾರ ತಿಳಿದು ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಆರೋಪಿ ವಿಕ್ರಂ ಗೋಪಾಲ ಸ್ವಾಮಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ನಿವೃತ್ತ ಅಧಿಕಾರಿ ಒಬ್ಬರ ಮಗ ಎಂದು ಬೆಳಕಿಗೆ ಬಂದಿದೆ. ವಿಧಾನಸೌಧ ಎಂ ಎಸ್ ಬಿಲ್ಡಿಂಗ್ ಓಡಾಡುತ್ತಿದ್ದ ವಿಕ್ರಂ ಗೋಪಾಲಸ್ವಾಮಿ ಸರ್ಕಾರಿ ಅಧಿಕಾರಿಗಳ ವಿವರ ತಿಳಿದುಕೊಂಡು ಬ್ಲಾಕ್ಮೇಲ್ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆರೋಪಿ ವಿಚಾರಣೆ ನಡೆಸಿರುವ ಪೊಲೀಸರು ತನಿಖೆಯನ್ನು ನಡೆಸಿದ್ದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.