ಭಾರತದ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಏರಿಕೆಯಾಗಲಿದೆ. ಹೊಸ ತುಟ್ಟಿಭತ್ಯೆ ಜನವರಿ ತಿಂಗಳಿನಿಂದಲೇ ಜಾರಿಗೆ ಬರಲಿದ್ದು, ಈ ಹೆಚ್ಚಳವನ್ನು ಸರ್ಕಾರ ಮಾರ್ಚ್ ತಿಂಗಳಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.
ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುತ್ತಿದೆ. ನಿಯಮಗಳ ಅನುಸಾರ, ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ಕೂಡಲೇ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದಾದ ಬಳಿಕ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅದನ್ನು ಸೇರಿಸಲಾಗುತ್ತದೆ. ಮೇಲಿನ ನಿಯಮಗಳ ಅನುಸಾರ, ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ 9000 ರೂ. ಏರಿಕೆಯಾಗಲಿದೆ. ಉದ್ಯೋಗಿಯ ಮೂಲ ವೇತನ 18000 ರೂ.ಆಗಿದ್ದರೆ, 50% ಡಿಎಯ ಆಧಾರದಲ್ಲಿ ಅವರು 9000 ರೂ. ಪಡೆಯುತ್ತಾರೆ. ಆದರೆ, ಡಿಎ 50% ಆದ ಬಳಿಕ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಇದಾದ ಬಳಿಕ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಆ ನಂತರ ಮತ್ತೆ ಮೊದಲಿನ ನಿಯಮ ಅನ್ವಯವಾಗಲಿದೆಯಾಗಿದೆ.