ಉಡುಪಿ : ಗ್ರಾಮ ಪಂಚಾಯತಿ ಸದಸ್ಯನ ಮೇಲೆ 35 ಜನರಿಂದ ಡೆಡ್ಲಿ ಅಟ್ಯಾಕ್ ಆಗಿದ್ದು, ಜಟ್ಕಲ್ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಗ್ಯಾಂಗ್ ಅಟ್ಯಾಕ್ ನಡೆದಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡಕಲ್ ನಲ್ಲಿ ಈ ಅಟ್ಯಾಕ್ ನಡೆದಿದೆ ಎನ್ನಲಾಗುತ್ತಿದೆ.
ಗ್ರಾ. ಪಂ ಸದಸ್ಯ ಚಂದ್ರಮೋಹನ್ ನಾಯಕ್ ಮೇಲೆ ಈ ಒಂದು ಹಲ್ಲೆ ನಡೆದಿದ್ದು ಬೈಕಿಗೆ ಜೀಪ್ ಟಚ್ ಆಗಿದ್ದಕ್ಕೆ ಬೈಕ್ ಸವಾರ ಬೈದಿದ್ದ ಎನ್ನಲಾಗಿದೆ.ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ಚಂದ್ರಮೋಹನ್ ಕ್ಷಮೆ ಕೇಳಿದ್ದ ಆದರೂ ಕೂಡ ಕ್ಷಮೆ ಕೇಳಿದರು ಕೂಡ ಮನೆ ಬಳಿ ಬಂದು ಸುಮಾರು 35 ಜನರಿಂದ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆ ಬಳಿ ಬಂದಾಗ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 35 ಜನರು ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಗಾಯಾಳನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.