ಬೆಂಗಳೂರು : ನಾಳೆ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫಘಾನಿಸ್ತಾನ ಮಧ್ಯೆ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೊ ಪ್ರಯಾಣದ ಅವಧಿಯನ್ನು ಅಂದು ರಾತ್ರಿ 11.45ರವರೆಗೆ ವಿಸ್ತರಿಸಲಾಗಿದೆ.
ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೊ ನಿಲ್ದಾಣಗಳಿಂದ ರೈಲು ಸೇವೆಗಳನ್ನು ರಾತ್ರಿ 11.45 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ಅನೂಕೂಲಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳು ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಜ.17ರ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಮಾರಾಟಕ್ಕೆ ಲಭ್ಯ. ಈ ಕಾಗದದ ಟಿಕೆಟ್ಗಳು ರಾತ್ರಿ 8 ಗಂಟೆಯಿಂದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಯಾವುದೇ ಇತರ ಮೆಟ್ರೊ ನಿಲ್ದಾಣಕ್ಕೆ ದಿನದ ವಿಸ್ತ್ರತ ಅವಧಿಯಲ್ಲಿ ಒಂದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ರಿಯಾಯಿತಿ ವ್ಯವಸ್ಥೆ: 50 2. ಪೇಪರ್ ಟಿಕೆಟ್ ಜತೆಗೆ, ಸಾಮಾನ್ಯ ದರದಲ್ಲಿ ಶೇ.5ರ ರಿಯಾಯಿತಿಯೊಂದಿಗೆ ಕ್ಯೂ ಆರ್ ಕೋಡ್ ಟಿಕೆಟ್ಗಳನ್ನು ಪಂದ್ಯದ ದಿನದಂದು ಖರೀದಿಸಿದರೆ ಇಡೀ ದಿನಕ್ಕೆ ಮಾನ್ಯವಾಗಿರುತ್ತದೆ. ಅನುಕೂಲಕರ ಪ್ರಯಾಣಕ್ಕಾಗಿ శ్రీ రేటో ಪಂದ್ಯದ ಆರಂಭಕ್ಕೆ ವಾಟ್ಸಾಪ್, ನಮ್ಮ ಮೆಟ್ರೊ ಆ್ಯಪ್, ಪೇಟಿಎಂ ಮತ್ತು ಕ್ಯೂ ಆರ್ ಕೋಡ್ ಬಳಸುವಂತೆ ಬಿಎಂಆರ್ಸಿಎಲ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ವಿಸ್ತ್ರತ ಸಮಯದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣಗಳಲ್ಲಿ ಕ್ಯೂ ಆರ್ ಟಿಕೆಟ್ಗಳು, ಸ್ಮಾರ್ಟ್ ಕಾಡ್ ೯ಗಳು ಮತ್ತು ಪೇಪರ್ ಟಿಕೆಟ್ಗಳನ್ನು ಮಾತ್ರ ಅನುಮತಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್ಗಳಲ್ಲಿ ಜನಸಂದಣಿ ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಕೋರಲಾಗಿದೆ.