ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ ನಡೆಯುವಂತ ಫಲಪುಷ್ಪ ಪ್ರದರ್ಶನಕ್ಕೆ ಇದೀಗ ಸಮಯ ನಿಗದಿ ಮಾಡಲಾಗಿದೆ. ಜನವರಿ.18ರಿಂದ 28ರವರೆಗೆ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಈ ಕುರಿತಂತೆ ತೋಟಗಾರಿಕಾ ಜಂಟಿ ನಿರ್ದೇಶಕರಾದಂತ ಡಾ.ಎಂ ಜಗದೀಶ್ ಅವರು ನಾಳೆ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಐತಿಹಾಸಿಕ ಲಾಲ್ಬಾಗ್ ಗಾಜಿನಮನೆಯಲ್ಲಿ ಇದೇ ಜನವರಿ 18ರಿಂದ 28ರವರೆಗೆ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 215ನೇ ಫಲಪುಷ್ಪ ಪ್ರದರ್ಶನವನ್ನು, ತೋಟಗಾರಿಕೆ ಇಲಾಖಾವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಿಳಿಸಲಿದ್ದಾರೆ.
ಜ.18ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 2015ನೇ ಫಲಪುಷ್ಪ ಪ್ರದರ್ಶನ-2024ಕ್ಕೆ ಸಂಜೆ.6ಗಂಟೆಗೆ ಲಾಲ್ ಬಾಗ್ ನ ಗಾಜಿನಮನೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಡಿಸಿಎಂ ಡಿಕೆ ಶಿವಕುಮಾರ್, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಖ್ಯಾತ ವಿದ್ವಾಂಸ ನಾಡೋಜ ಡಾ.ಗೊ.ರು ಚನ್ನಬಸಪ್ಪ ಭಾಗವಹಿಸಲಿದ್ದಾರೆ.
ಈ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ ಗರುಡಾಚಾರ್ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ದೇವೇಗೌಡ, ಟಿಎ ಶರವಣ ಸೇರಿದಂತೆ ಇತರರು ಇರಲಿದ್ದಾರೆ.
‘AI’ ಜಗತ್ತಿನಾದ್ಯಂತ ಶೇ.40ರಷ್ಟು ‘ಉದ್ಯೋಗ’ಗಳ ಮೇಲೆ ಪರಿಣಾಮ ಬೀರಲಿದೆ: ಐಎಂಎಫ್
BIG NEWS: ಕರುನಾಡಿಗೆ ‘ಜಲಕಂಟಕ’: ‘ಡ್ಯಾಂ’ಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತ, ಕಳೆದ ವರ್ಷ ಎಷ್ಟಿತ್ತು? ಈಗ ಎಷ್ಟಿದೆ?