ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಡ್ಯಾಂಗಳಿಗೆ ಹರಿದು ಬಂದಂತ ನೀರಿನ ಪ್ರಮಾಣ ಕೂಡ ಕಡಿಮೆಯಾಗಿತ್ತು. ಹೀಗಾಗಿ ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತಗೊಂಡಿದೆ. ಈ ಮೂಲಕ ಕರುನಾಡಿಗೆ ಜಲಕಂಟಕ ಫಿಕ್ಸ್ ಎಂಬಂತೆ ಆಗಿದೆ.
ಒಂದೆಡೆ ಕಾವೇರಿ ನದಿ ನೀರು ಹಂಚಿಕೆಗಾಗಿ ಸಂಘರ್ಷ. ಮತ್ತೊಂದೆಡೆ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರೀ ಕುಸಿತಗೊಳ್ಳುತ್ತಿರೋದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಬೇಸಿಗೆಯಲ್ಲಿ ನೀರಿಗೆ ಆಹಾಕಾರ ಏಳಲಿದೆ ಎನ್ನಲಾಗುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ಬಾರಿಗೆ ಹೋಲಿಸಿದ್ರೇ ಶೇ.42ರಷ್ಟು ಕುಸಿತಗೊಂಡಿದೆ. ಈ ಮಾಹಿತಿಯನ್ನು ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದಿಂದ ( Karnataka State Natural Disaster Monitoring Centre-KSNDMC ) ದಾಖಲೆಯ ಸಹಿತ ಬಿಡುಗಡೆ ಮಾಡಲಾಗಿದೆ.
KSNDMC ನೀಡಿರುವಂತ ಮಾಹಿತಿಯಂತೆ ಕಳೆದ ವರ್ಷ ಎಷ್ಟಿತ್ತು.? ಈಗ ನೀರಿನ ಪ್ರಮಾಣ ಎಷ್ಟಿದೆ ಗೊತ್ತಾ?
ಕೆಎಸ್ ಡಿಎಂಸಿ ದತ್ತಾಂಶದ ಮಾಹಿತಿಯ ಪ್ರಕಾರ ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ 95.19 ಟಿಎಂಸಿ ನೀರಿತ್ತು. ಆದ್ರೇ ಅದೇ ಈ ಬಾರಿ 52.19 ಟಿಎಂಸಿ ನೀರಿದೆ. ಇನ್ನೂ ರಾಜ್ಯದ ಜೀವನಾಡಿ ಕೆ ಆರ್ ಎಸ್ ಡ್ಯಾಂನಲ್ಲಿ ಕಳೆದ ವರ್ಷ 41.13 ಟಿಎಂಸಿ ನೀರಿದ್ರೇ, ಈ ಬಾರಿ ಇರೋದು 19.81 ಟಿಎಂಸಿ ಮಾತ್ರವೇ ಆಗಿದೆ.
ಆಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷ 87.23 ಟಿಎಂಸಿ ನೀರಿತ್ತು. ಈಗ 54.76 ಟಿಎಂಸಿ ನೀರು ಮಾತ್ರವೇ ಇದೆ. ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ 67.75 ಟಿಎಂಸಿ ಇದ್ದಂತ ನೀರಿನ ಸಂಗ್ರಹ, ಈ ಬಾರಿ 10.20 ಟಿಎಂಸಿ ಮಾತ್ರವೇ ಇದೆ.
ಒಟ್ಟಾರೆಯಾಗಿ ರಾಜ್ಯದ ಜಲಾಶಯಗಳಿಗೆ 835 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಆದ್ರೇ ಈ ವರ್ಷ ಈ ಜಲಾಶಯಗಳಲ್ಲಿ ಇರೋದು ಮಾತ್ರ 387 ಟಿಎಂಸಿ ನೀರು ಮಾತ್ರವೇ ಆಗಿದೆ. ಅದೇ ಕಳೆದ ವರ್ಷ ರಾಜ್ಯದ ಜಲಾಶಯಗಳಲ್ಲಿ 619 ಟಿಎಂಸಿ ನೀರು ಸಂಗ್ರಹವಿತ್ತು.
12.01.2024 ರಂತೆ ಪ್ರಮುಖ ಜಲಾಶಯದ ಮಟ್ಟ.
Major Reservoir Level as of 12.01.2024. pic.twitter.com/uEzp0NCW6y— Karnataka State Natural Disaster Monitoring Centre (@KarnatakaSNDMC) January 12, 2024
BREAKING: ‘ಗವಿಗಂಗಾಧರೇಶ್ವರ’ನ ಸ್ಪರ್ಶಿಸಿದ ‘ಸೂರ್ಯ ರಶ್ಮಿ’: ಕೌತುಕದಿಂದ ‘ಬೆಳಕಿನ ವಿಸ್ಮಯ’ ಕಣ್ತುಂಬಿಕೊಂಡ ಭಕ್ತರು