ಹಾವೇರಿ : ಜಿಲ್ಲೆಯ ಹಾನಗಲ್ ನಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾವೇರಿ ಜಿಲ್ಲೆಯ ನರಸೀಪುರ ಎಲ್ಲಿ ಪ್ಯಾಡ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಪ್ರಕರಣದಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಪ್ರಕರಣದಲ್ಲೂ ಯಾರು ಕಾನೂನನ್ನು ಕೈ ತೆಗೆದುಕೊಂಡಿದ್ದರೊ ಅವರಿಗೆ ಶಿಕ್ಷೆ ನೀಡಲಾಗುತ್ತದೆ. ಯಾರನ್ನು ಕೂಡ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗ ತಾನೇ ಸಂತ್ರಸ್ತ ಕುಟುಂಬಸ್ಥರು ಈಗ ತಾನೇ ಅರ್ಜಿಯನ್ನು ಕೊಟ್ಟಿದ್ದಾರೆ. ಸರ್ಕಾರ ಅರ್ಜಿಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಬೊಮ್ಮಾಯಿ ಈ ಪ್ರಕರಣ ಕುರಿತು sit ತನಿಖೆಗೆ ಆಗ್ರಹಿಸಿದ್ದಾರೆ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ಎಸ್ ಐ ಟಿ ಅಲ್ಲಿ ಇರುವವರು ಪೊಲೀಸ್ ಅಧಿಕಾರಿಗಳೇ ಈಗಿರುವ ಅಧಿಕಾರಿಗಳು ಕೂಡ ಪೊಲೀಸರೇ. ಬೊಮ್ಮಾಯಿ ಅವರು ಹೇಳಿದರು ಅಂತ ಮಾಡುವುದಿಲ್ಲ. ಎಂದು ಅವರಿಗೆ ತಿಳಿಸಿದರು.
ಬೆಳಗಾವಿ ಘಟನೆ ಆಗಿರಬಹುದು ಯಾವ ಪ್ರಕರಣಗಳ ಆಗಿರಬಹುದು ಮುಚ್ಚಿ ಹಾಕುವ ಪ್ರಶ್ನೆ ಇಲ್ಲ.ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಯಾರು ತಪ್ಪು ಮಾಡಿದರೆ ಅವರ ವಿರುದ್ಧ ಕಠಿಣವಾದಂತ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರ ಇದನ್ನು ಪರಿಶೀಲ ನಡೆ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತದೆ. ಸಂತ್ರಸ್ಥೆಗೆ
ಎಲ್ಲಕ್ಕಿಂತ ಮುಖ್ಯವಾಗಿ ಹೋಗಿ ಬಂದು ಸಾಂತ್ವನ ಹೇಳುವುದು ಒಂದು ಭಾಗವಾದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವುದು ಇನ್ನೊಂದು ಭಾಗವಾಗಿದೆ.
ಇನ್ನು ತಮ್ಮ ವಿರುದ್ಧವೇ ಏಕವಚನದಲ್ಲಿ ವಾಗ್ದಾಳ ನಡೆಸಿದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಆರೋಪ ಮಾಡುತ್ತಾರೆ. ಅನಂತ್ ಕುಮಾರ್ ಹೆಗಡೆ ಅವರು ಇವತ್ತಿನವರೆಗೂ ನಾಪತ್ತೆಯಾಗಿದ್ದರು.ಏಕಾಏಕಿ ಚುನಾವಣೆ ಬಂದ ಮೇಲೆ ಕಾಣಿಸಿಕೊಂಡಿದ್ದಾರೆ.ಅವರು ಕ್ಷೇತ್ರಕ್ಕೆ ಏನಾದರೂ ಕೆಲಸ ಮಾಡಿದ್ದಾರ? ಎಂಪಿ ಆಗಿ ಬಡವರ ಕಷ್ಟ ಕೇಳಿದ್ದಾರಾ? ಸಂಸ್ಕೃತಿ ಎಂದರೆ ಮನುಷ್ಯತ್ವ ಅಂತ ಅರ್ಥ ಮನುಷ್ಯತ್ವ ಇರಬೇಕು ಮನುಷ್ಯನಿಗೆ ಎಂದು ತಿರುಗೇಟು ನೀಡಿದರು.