ಶಿವಮೊಗ್ಗ: ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುಗಳ ಜನ್ಮಭೂಮಿಯ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ(ಅಲ್ಲಮಪ್ರಭುಗಳ ಜನ್ಮಭೂಮಿ)ಹಾಗೂ ಅನಿಮಿಷಾರಣ್ಯರ ಮಾಳಗೊಂಡನಕೊಪ್ಪದ ತಪೋಭೂಮಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು.
ಹನ್ನೆರಡನೇ ಶತಮಾನದ ಪ್ರಸಿದ್ಧ ಶರಣ ಅಲ್ಲಮಪ್ರಭುಗಳು ಅದ್ವಿತೀಯ ಸಾಧಕರು. ಅವರ ಜೀವನ ಸಂದೇಶಗಳು ಇಂದಿನ ಜನರಿಗೆ ತಲುಪಿಸುವ ಸದುದ್ದೇಶದಿಂದ ಹಾಗೂ ನಮ್ಮ ಕೋರಿಕೆಯಂತೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭುಗಳ ಹೆಸರನ್ನು ನಾಮಕರಣ ಗೊಳಿಸಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆಂದು ಅವರು ನುಡಿದರು.
ವಿಶೇಷವಾಗಿ ಶಿವಮೊಗ್ಗ ಜಿಲ್ಲೆ 12ನೇ ಶತಮಾನದಲ್ಲಿ ಶರಣರ ನೆಲೆವೀಡಾಗಿಯೇ ಪ್ರಸಿದ್ದವಾಗಿತ್ತು. ಅಂತಹ ಮಹಾತ್ಮರ ಪುಣ್ಯಭೂಮಿಯನ್ನು ಗುರುತಿಸಿ ಅಭಿವೃದ್ಧಿಪಡಿಸದಿರುವುದು ನೋವಿನ ಸಂಗತಿ. ಪ್ರಸ್ತುತ ಆಡಳಿತಾರೂಡ ಸರ್ಕಾರ ಈ ಕ್ಷೇತ್ರದ ವಿಕಾಸಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಈ ಕ್ಷೇತ್ರದ ವಿಕಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಶರಣರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು ಎಂದರು.
‘ಹಾನಗಲ್ ಪ್ರಕರಣ’ ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ: ಮಾಜಿ ಸಿಎಂ ‘ಬೊಮ್ಮಾಯಿ’ ಗಂಭೀರ ಆರೋಪ
ಬೆಂಗಳೂರಿಗರೇ ಗಮನಿಸಿ: ‘ಕೆರೆ, ಉದ್ಯಾನ, ಹಸಿರು ರಕ್ಷಣೆ’ಗೆ ಈ ಮೂರು ಆ್ಯಪ್ ಬಳಸಿ