ಭುವನೇಶ್ವರ : ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಕಾರ ಒಡಿಶಾದ ಸುದರ್ಶನ ಸಾಹೂ ಎಂಬವರು ಶ್ರೀರಾಮನಿಗಾಗಿ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ.
ಶ್ರೀರಾಮ ಹೊಂದಿದ್ದ ಕೋದಂಡ ಎಂಬ ಬಿಲ್ಲಿನ ಮಾದರಿಯಲ್ಲಿ ತಾಮ್ರದಿಂದ ಸಿದ್ಧಗೊಳಿಸಿದ ವಿಶೇಷ ಬಿಲ್ಲು ಮತ್ತು ಬಾಣವನ್ನು ಅವರು ಸಂಗ್ರಹಿಸಿದ್ದಾರೆ. ಅದು 2 ಅಡಿ ಉದ್ದ 1.5 ಅಡಿ ಅಗಲ ಹೊಂದಿದೆ. ಜತೆಗೆ 2 ಕೆ.ಜಿ. ತೂಕ ಹೊಂದಿದೆ. ಈ ವಿಶೇಷ ಬಿಲ್ಲು ಮತ್ತು ಬಾಣಕ್ಕೆ ಮಯೂರ್‌ಕಾಂತಿಯ ಎಂಬ ಹೆಸರು ಇರಿಸಿರುವುದಾಗಿ ಹೇಳಿಕೊಂಡಿದ್ದಾರೆಯಾಗಿದೆ.