ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಾಲ್ಕು ನಗರಗಳಿಗೆ ಒಂದು ಎನ್ನುವಂತೆ ಆರ್.ಟಿಓ ಕಚೇರಿಯಿದೆ. ಈ ಕಚೇರಿಗೆ ಡಿಎಲ್, ವಾಹನ ನೋಂದಣಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಜನರು ಬಂದ್ರೆ ಆರ್.ಟಿಓ ಇಲ್ಲದೇ ಜನರು ದಿನಂಪ್ರತಿ ಪರದಾಡುತ್ತ, ಹೈರಾಣಾಗುತ್ತಿರೋ ಘಟನೆ ನಡೆಯುತ್ತಿದೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರದ ಆರ್ ಟಿ ಓ ಕಛೇರಿಯಲ್ಲಿ ಉಪ ಸಾರಿಗೆ ಅಧಿಕಾರಿಗಳ ಅನುಪಸ್ಥಿತಿ ಸಾಗರದ ವಾಹನ ಮಾಲಿಕರು ಪರದಾಡುವ ಪರಿಸ್ಥಿತಿ ಬಂದಿದೆ.
ಯಾಕೆ ಈ ಸಮಸ್ಯೆ.?
ಸಾಗರದ ಆರ್ ಟಿ ಒ ಕಛೆರಿಗೆ ಸಾಗರ ಶಿಕಾರಿಪುರ ಶಿರಾಳಕೊಪ್ಪ. ಸೊರಬ ಹೊಸನಗರದಿಂದ ಜನರು ಬರುತ್ತಾರೆ ಬಂದ ಮೇಲೆ ಉಪ ಸಾರಿಗೆ ಅಧಿಕಾರಿಗಳ ಗೈರು ನೋಡಿ ಹೊರ ತಾಲೂಕಿನಿಂದ ಬಂದವರು ತಾಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕಿ ಹೊಗುತಿದ್ದಾರೆ
ಸಾಗರದ ಉಪ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಗೈರು ಇದರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಗೊತ್ತಾಗಿದ್ದು, ಎರಡು ಕಡೆ ಅವರನ್ನು ಡೆಪ್ಯೂಟೇಷನ್ ಮೇಲೆ ಕರ್ತವ್ಯಕ್ಕೆ ನಿಯೋಜಿಸಿರೋದು ಆಗಿದೆ.
ಹೀಗೆ ಎರಡು ಆರ್ ಟಿಓ ಕಚೇರಿಗಳಿಗೆ ಡೆಪ್ಯೂಟೇಷನ್ ಮೇಲೆ ಕರ್ತವ್ಯ ನಿರ್ವಹಿಸೋದಕ್ಕೆ ಉಪ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಹಾಕಿರೋದರಿಂದ ಸೀಮಿತ ದಿನಗಳಲ್ಲಿ ಮಾತ್ರವೇ ಸಾಗರದಲ್ಲಿ ಲಭ್ಯವಿರುತ್ತಾರೆ. ಆ ದಿನಗಳಲ್ಲಿ ಬಂದ್ರೆ ಮಾತ್ರ ಸಾರಿಗೆ ಇಲಾಖೆಯ ಕೆಲಸ ಆಗುತ್ತದೆ. ಇಲ್ಲವಾದಲ್ಲಿ ಬಂದ ದಾರಿಗೆ ಸುಂಕವಿಲ್ಲ ಅನ್ನೋ ಹಾಗೆ ವಾಪಾಸ್ ಜನರು ತೆರಳುವಂತೆ ಆಗಿದೆ.
ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಗಮನಕ್ಕೆ ಇದು ಬಂದಿಲ್ವ?
ಕಳೆದ ಮೂರು ತಿಂಗಳಿಂದ ಈತರದ ಸಮಸ್ಯೆ ಸಾಗರ R T O ಕಛೇರಿಯಲ್ಲಿ ಆಗುತ್ತಿದೆ. ಆದ್ರೇ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ಬಂದಿದ್ದರೆ ಸರಿಯಾಗುತಿತ್ತು ಎಂದು ಜನತೆ ಹೇಳುತ್ತಿದ್ದಾರೆ. ಹಾಗಾದ್ರೇ ಅವರ ಗಮನಕ್ಕೆ ಬಂದಿಲ್ವ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
ಈ ಕೂಡಲೇ ಸಾಗರ ಶಾಸಕರು ಈ ಬಗ್ಗೆ ಗಮನಿಸಬೇಕು. ಸಾಗರ ಆರ್ ಟಿ ಓ ಕಚೇರಿಯಲ್ಲಿನ ಈ ಸಮಸ್ಯೆಯನ್ನು ಸರಿಪಡಿಸಿ, ತಾಲೂಕಿನ ಜನತೆಗೆ ಸಾರಿಗೆ ಇಲಾಖೆಯ ಕೆಲಸಗಳಿಗೆ ಬಂದು ಪರದಾಡೋದನ್ನ ತಪ್ಪಿಸಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.
ವರದಿ: ಉಮೇಶ್ ಮೊಗವೀರ, ಸಾಗರ
BIG NEWS: ‘ಆಪರೇಷನ್ ಸರ್ವಶಕ್ತಿ’: ಜಮ್ಮು-ಕಾಶ್ಮೀರದಲ್ಲಿ ‘ಭಾರತೀಯ ಸೇನೆ’ಯಿಂದ ‘ಭಯೋತ್ಪಾದನಾ ವಿರೋಧಿ ಅಭಿಯಾನ’
BIG NEWS: ನಾನು ಯಾವುದೇ ಕಾರಣಕ್ಕೂ ‘ಲೋಕಸಭೆ’ಗೆ ಸ್ಪರ್ಧೆ ಮಾಡೋದಿಲ್ಲ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಘೋಷಣೆ