ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 119 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 152 ಮಂದಿ ಗುಣಮುಖರಾಗಿದ್ದಾರೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ RTPCR ಮೂಲಕ 4352 ಹಾಗೂ RAT ಮೂಲಕ 590 ಸೇರಿದಂತೆ 4942 ಮಂದಿಯನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದೆ.
ರಾಜ್ಯದಲ್ಲಿ 19 ಸೋಂಕಿತರು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, 17 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿದಂತೆ 36 ಸೋಂಕಿತರು ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಸಪೋರ್ಟ್ ನಲ್ಲಿ ಓರ್ವ ಸೋಂಕಿತರಿದ್ದರೇ, ಐಸಿಯುನಲ್ಲಿ 12 ಮಂದಿ, ಐಸಿಯು ವೆಂಟಿಲೇಟರ್ ಸಪೋರ್ಟ್ ನಲ್ಲಿ ಐವರು ಸೇರಿದಂತೆ 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.
ಕಳೆದ 24 ಗಂಟೆಯಲ್ಲಿ ಬಳ್ಳಾರಿ 04, ಬೆಳಗಾವಿ 08, ಬೆಂಗಳೂರು ಗ್ರಾಮಾಂತರ 05, ಬೆಂಗಳೂರು ನಗರ 33, ಚಾಮರಾಜನಗರ 04, ಚಿಕ್ಕಬಳ್ಳಾಪುರ 03, ಚಿಕ್ಕಮಗಳೂರು 06, ಚಿತ್ರದುರ್ಗ 02, ದಕ್ಷಿಣ ಕನ್ನಡ 04, ಧಾರವಾಡ, ಗದಗ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ ಮೂವರು, ಕೊಡಗು ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ ಐವರು, ಮೈಸೂರು 08, ತುಮಕೂರು 07 ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 119 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಇಂದು ಸೋಂಕಿತರಾದಂತ 152 ಜನರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 959 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
BREAKING: ನಾಳೆ ‘ಮಣಿಪುರ’ದಲ್ಲಿ ನಡೆಯೋ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ‘ಸಿಎಂ ಸಿದ್ಧರಾಮಯ್ಯ’ ಭಾಗಿ
‘ಆಸಿಡ್ ಸಂತ್ರಸ್ತ ಮಹಿಳೆ’ಯರ ಗಮನಕ್ಕೆ: ‘2.5 ಲಕ್ಷ’ದವರೆಗೆ ಸಹಾಯಧನ, ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ