ಶಿವಮೊಗ್ಗ: ನಗರದಲ್ಲಿನ ಫ್ರೀಡಂ ಪಾರ್ಕ್ ಗೆ ಈವರೆಗೆ ಯಾವುದೇ ಹೆಸರಿಟ್ಟಿರಲಿಲ್ಲ. ಇಂತಹ ಪಾರ್ಕಿಗೆ ಅಲ್ಲಮ ಪ್ರಭು ಅವರ ಹೆಸರಿಡೋದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.
ಇಂದು ಯುವನಿಧಿ ಯೋಜನೆಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಅಲ್ಲಮಪ್ರಭು ಅವರಿಂದಲೇ ಇಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಯಿತು: ಫ್ರೀಡಂಪಾರ್ಕಿಗೆ ಅಲ್ಲಮ ಪ್ರಭು ಹೆಸರು ಇಡೋದಾಗಿ ಸಿ.ಎಂ.ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು.
ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭುವಿನ ಹೆಸರನ್ನು ಶಿವಮೊಗ್ಗದ ಫ್ರೀಡಂಪಾರ್ಕಿಗೆ ಇಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ಶಿವಮೊಗ್ಗ ಜಿಲ್ಲೆಯವರೇ ಆದ ಬಸವಾದಿ ಶರಣ ಅಲ್ಲಮ ಪ್ರಭುವಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಕೊಡುವ ಗೌರವ ಎಂದು ಬಣ್ಣಿಸಿದರು.
ಮುಖ್ಯಮಂತ್ರಿಗಳು ಅಲ್ಲಮ ಪ್ರಭುವಿನ ಹೆಸರನ್ನು ಘೋಷಿಸುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಮಂದಿ ಕುಳಿತಿದ್ದ ಕುರ್ಚಿಗಳಿಂದ ಮೇಲೆದ್ದು ಚಪ್ಪಾಳೆ ತಟ್ಟಿ ಕುಣಿದು, ಕೂಗಿ ಸಂಭ್ರಮದಿಂದ ಸ್ವಾಗತಿಸಿದರು.
ಕಲಬುರ್ಗಿಯಲ್ಲಿ ‘KSRTC ಬಸ್-ಬೈಕ್’ ನಡುವೆ ಭೀಕರ ಅಪಘಾತ: ‘ಇಬ್ಬರು ಸವಾರ’ರು ಸ್ಥಳದಲ್ಲೇ ಸಾವು
Watch Video: ‘ನಾಸಿಕ್’ನ ಕಲಾರಾಮ್ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ ‘ಪ್ರಧಾನಿ ಮೋದಿ’