ಬೆಂಗಳೂರು : ಲೋಕಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದು ಬಿಜೆಪಿ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್ ಕೂಡ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.ಈ ಹಿನ್ನೆಲೆಯಲ್ಲಿ ನಿನ್ನೆ ವರಿಷ್ಠರ ಕರೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚಿವರು ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಸಚಿವರಿಗೆ ಕೂಡ ಲೋಕಸಭೆಯ ಟಿಕೆಟ್ ನೀಡುವುದರ ಕುರಿತು ಚರ್ಚಿಸಲಾಯಿತು.
ಈ ವಿಷಯದ ಕುರಿತಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಮಾತನಾಡಿ, ಎಂಪಿ ಚುನಾವಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸೂಚಿಸಿದ್ದಾರೆ.ಒಂದು ವೇಳೆ ಎಂಪಿ ಚುನಾವಣೆಯಲ್ಲಿ ಸೋತರೆ ಇಲ್ಲದಿದ್ದರೆ ಸಚಿವರ ತಲೆದಂಡವು ಆಗಲಿದೆ ಎಂದು ಎಚ್ಚರಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಗೆ ಬಂದರೆ ಅಭ್ಯಂತರ ಇಲ್ಲ ಎಂದು ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಆದರೆ ಟಿಕೆಟ್ ವಿಚಾರದಲ್ಲಿ ಕೆಲ ಮಾನದಂಡ ಅನ್ವಯವಾಗಲಿದೆ. ಒಬ್ಬ ಮುಖಂಡ ಬರುತ್ತಾರೆಂದರೆ ಅದನ್ನೇ ನಾವು ನಿರೀಕ್ಷೆ ಮಾಡಿರುತ್ತೇವೆ.ಮುದ್ದ ಹನುಮಗೌಡ ನನ್ನನ್ನು ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿದ್ದರು. ಮುದ್ದಹನುಮೇಗೌಡ ನಮ್ಮ ಪಕ್ಷಕ್ಕೆ ಬರಲು ಯಾವುದೇ ರೀತಿಯಾದ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.