ಕೊಪ್ಪಳ : ಕೆ ಆರ್ ಪಿ ಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ರಾಯಚೂರಿನ ಮಾಜಿ ಸಚಿವ ಶಿವನಗೌಡ ನಾಯಕ ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಗುಪ್ತ ಸಭೆ ನಡೆಸಿರುವುದು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಹೌದು ಗಂಗಾವತಿ ಕ್ಷೇತ್ರದ ಹಾಲಿ ಶಾಸಕ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿಯತ್ತ ವಾಲುತ್ತಿದ್ದಾರಾ ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದ್ದು, ಇತ್ತೀಚೆಗೆ ಅವರು ನಡೆದುಕೊಳ್ಳುತ್ತಿರುವ ರೀತಿಯೂ ಇದಕ್ಕೆ ಪೂರಕವಾಗಿಯೇ ಇದೆ. ಈ ಮಧ್ಯೆ ನಿನ್ನೆ ಸಂಜೆ ದೇವದುರ್ಗದ ಮಾಜಿ ಶಾಸಕ ಶಿವನಗೌಡ ನಾಯಕ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಚರ್ಚೆ ನಡೆಸಿದ್ದು, ಈ ಚರ್ಚೆಯಿಂದ ಬಿಜೆಪಿಗೆ ಸೇರುವ ಅನುಮಾನ ಹೆಚ್ಚಾಗಿದೆ.
ನಿನ್ನೆ ಸಂಜೆ ಶಾಸಕ ಜನಾರ್ದನರೆಡ್ಡಿಯನ್ನ ಭೇಟಿ ಮಾಡಿರುವ ಮಾಜಿ ಶಾಸಕ ಶಿವನಗೌಡ ನಾಯಕ. ಭೇಟಿ ವೇಳೆ ಉಭಯ ನಾಯಕರ ಮಧ್ಯೆ ಸುಮಾರು ಒಂದು ತಾಸು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ನಾಯಕರ ಚರ್ಚೆಯಿಂದ ರಾಜಕೀಯದಲ್ಲಿ ಅನುಮಾನ ಹೆಚ್ಚಳವಾಗಿದೆ.
ಹಿಂದಿನಿಂದಲೂ ಗಾಲಿ ಜನಾರ್ದನ ರೆಡ್ಡಿಯವರನ್ನ ಮರಳಿ ಬಿಜೆಪಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಆದರೆ ಬಿಜೆಪಿ ಸೇರುವ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸದ ಜನಾರ್ದನರೆಡ್ಡಿ. ಕೆಆರ್ಪಿಪಿ ಪಕ್ಷದಲ್ಲೇ ಮುಂದುವರಿಯುವೆ ಎಂದು ಹೇಳಿದ್ದಾರೆ ಅದ್ಯಾಗೂ ಜನರ್ದಾನರೆಡ್ಡಿಯವರನ್ನು ಬಿಜೆಪಿ ಸೇರಿಸುವ ಪ್ರಯತ್ನ ಮುಂದುವರಿಸಿರುವ ಬಿಜೆಪಿ.