ಚಿಕ್ಕಮಗಳೂರು : ಇದೆ 22ರಂದು ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮಾರಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರನ್ನು ಓಲೈಸಿ ಜಾತಿವಾರು ಸಮಾಜವನ್ನು ಒಡೆಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಣಿತರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸಮಾಜ ಒಡೆಯುವುದರಲ್ಲಿ ಪರಿಣಿತ.ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಸಿ ಟಿ ರವಿ ಆಕ್ರೋಶ ಹೊರ ಹಾಕಿದ್ದು, ವೀರಶೈವ ಲಿಂಗಾಯತ ಸಮಾಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಡೆಯಲು ಹೋಗಿದ್ದರು. ಸಮಾಜ ಓಡೆಯುವುದರಲ್ಲಿ ಸಿದ್ದರಾಮಯ್ಯ ಪ್ರೊಡ್ಯೂಸರ್ ಆಗಿದ್ದಾರೆ ಎಂದರು.
ಅಲ್ಪಸಂಖ್ಯಾತರ ಓಲೈಕೆಗಾಗಿ ಅಯೋಧ್ಯೆಯ ಶ್ರೀರಾಮ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಬಹಿಷ್ಕರಿಸಿದ ಉದ್ದೇಶವೇ ಮುಸ್ಲಿಮತಗಳನ್ನು ಉಳಿಸಿಕೊಳ್ಳುವುದಕ್ಕೆ. ಹಿಂದುಗಳನ್ನು ಜಾತಿವಾರು ಒಡೆಯುವ ನೀತಿ ಅವರದ್ದಾಗಿದೆ. ಸಿದ್ದರಾಮಯ್ಯ ಜಾತಿವಾರು ಸಮಾಜವನ್ನು ಪಡೆಯಲು ಹೋಗಿದ್ದಾರೆ.
ಅಲ್ಪಸಂಖ್ಯಾತರ ಓಲೆಕೆ ಗೋಸ್ಕರನೇ ಇವತ್ತು ರಾಮಮಂದಿರ ಪ್ರಾಣ ಪ್ರತಿಷ್ಠಾನಕ್ಕೆ ಕಾಂಗ್ರೆಸ್ ಬಹಿಷ್ಕಾರ ಮಾಡಿದೆ. ಬಹಿಷ್ಕಾರದ ಪ್ರಮುಖ ಉದ್ದೇಶವೇ ಮುಸ್ಲಿಮರ ಮತಗಳನ್ನು ಉಳಿಸಿಕೊಳ್ಳುವುದಕ್ಕೆ. ಮುಂಚೆ 1947ರಲ್ಲಿ ದೇಶವನ್ನು ಒಡೆದವರು ಈಗ ಜಾತಿವಾರು ಮೂಲಕ ಸಮಾಜವನ್ನು ಒಡೆಯಲು ಹೊರಟಿದ್ದಾರೆ.
ಶ್ರೀ ರಾಮ ಎಲ್ಲರನ್ನೂ ಜೋಡಿಸಿದವನು. ರಾಮನ ಕಾರ್ಯಕ್ಕೆ ಪ್ರಾಣಿ ಪಕ್ಷಿಗಳು ಸೇರಿದಂತೆ ಎಲ್ಲ ಸಮುದಾಯದವರು ಕೈಜೋಡಿಸಿದ್ದಾರೆ. ಗುಹಾ, ಶಬರಿ, ಹನುಮಂತ ಜಟಾಯು ವಿಭೀಷಣ ಹೀಗೆ ಎಲ್ಲರೂ ರಾಮನ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರಾಮನ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳುವ ಯೋಗವು ಕಾಂಗ್ರೆಸ್ ನವರಿಗೆ ಇಲ್ಲ ಎಂದು ಸಿಟಿ ರವಿ ಕಿಡಿ ಕಾಡಿದ್ದಾರೆ.