ಮಂಗಳೂರು : ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಇದೆ 22 ರಂದು ಘಟನೆಗೊಳಲಿದ್ದು ಈ ಒಂದು ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ನಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಸಿಎಂ ಹೇಳಿಕೆಗೆ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು ಸಿಎಂ ರಾಮಮಂದಿರಕ್ಕೆ ಹೋಗಬಾರದೆಂಬ ಮಾನಸಿಕತೆಯಲ್ಲಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ,ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಮ ಕಾಲ್ಪನಿಕ ಎಂದು ಕೋರ್ಟಿಗೆ ಅಫಿಡೆವೆಟ್ ಸಲ್ಲಿಸಿದ್ದು ಕಾಂಗ್ರೆಸ್. ರಾಮಂದಿರ ಆಗಿರುವುದನ್ನು ಕಾಂಗ್ರೆಸ್ ನದ್ದು ಸಹಿಸದ ಮಾನಸಿಕತೆಯಾಗಿದೆ ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ನವರ ಮಾನಸಿಕತೆ ಹಾಗೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ರಾಮಮಂದಿರಕ್ಕೆ ಹೋಗಬಾರದೆಂಬ ಮಾನಸಿಕತೆಯಲ್ಲಿ ಇದ್ದಾರೆ. ಕಾಂಗ್ರೆಸ್ನ ಕೇಳಸ್ಥರದ ಹಿಂದೂ ಕಾರ್ಯಕರ್ತರು ರಾಮ ಮಂದಿರ ಬಗ್ಗೆ ಸಂಭ್ರಮ ಪಡುತ್ತಿದ್ದಾರೆ. ಶ್ರೀರಾಮ ಭಕ್ತರಿಗೆ ಕಾಂಗ್ರೆಸ್ ಅಪಚಾರ ಮಾಡಿದೆ. ಅಲ್ಪಸಂಖ್ಯಾತರ ತುಷ್ಟಿಕರಣವೇ ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಕಾರಣವಾಗಿದೆ.ನಮ್ಮ ಹೆಸರಲ್ಲಿ ರಾಮ ಇದ್ದಾರೆ ಎನ್ನುವ ಡಿಕೆ ಶಿವಕುಮಾರ್ ಈಗ ಏನು ಹೇಳುತ್ತಾರೆ ಎಂದು ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟಾಂಗ್ ನೀಡಿದ್ದಾರೆ.