ಬೆಂಗಳೂರು: ರಾಜ್ಯಾದ್ಯಂತ ಪ್ರಮುಖ ಖಾಸಗಿ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಅಳವಡಿಸಿಕೊಳ್ಳಲು ದೇವಾಲಯಗಳ ಆಡಳಿತ ಮಂಡಳಿಗಳು ಮುಂದಾಗಿವೆ ಈ ನಿಟ್ಟಿನಲ್ಲಿ ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಬಗ್ಗೆ ಈ ಕುರಿತು ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಕರ್ನಾಟಕ ದೇಗುಲ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಚಾಲಕ ಮೋಹನ್ ಗೌಡ ಬೆಂಗಳೂರಿನ 50 ದೇವಸ್ಥಾನಗಳು ಸೇರಿದಂತೆ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ಮಾತನಾಡಿ ದೇವಾಲಯಗಳಲ್ಲಿ ಗುರುವಾರದಿಂದ ಹಂತಹಂತವಾಗಿ ವಸ್ತ್ರಸಂಹಿತೆಯನ್ನು ಜಾರಿ ಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ದೇವಾಲಯಗಳಲ್ಲೂ ಅನುಷ್ಠಾನಕ್ಕೆ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಮಾಡಲಾಗುವುದುಅಂಥ ತಿಳಿಸಿದರು.
ಈ ವಸ್ತ್ರಗಳಿಗೆ ಅವಕಾಶ : ಲಂಗ-ದಾವಣಿ, ಸೀರೆ, ಚೂಡಿದಾರ, ಸಲ್ವಾರ್ – ಕುರ್ತಾ ಪುರುಷರು: ಕುರ್ತಾ, ಧೋತಿ, ಲುಂಗಿ, ಪೈಜಾಮ ಅಥವಾ ಸಾಮಾನ್ಯ ಶರ್ಟ್-ಪ್ಯಾಂಟ್ಗೆ ಅವಕಾಶ ನೀಡಲಾಗಿದೆ.
ಈ ವಸ್ತ್ರಗಳಿಗೆ ಅವಕಾಶವಿಲ್ಲ : ರ್ಟ್, ಮಿಡಿ, ಶಾರ್ಟ್ಸ್, ಜೀನ್ಸ್, ಸ್ಟೀವ್‌ಸ್, ಬರ್ಮುಡಾ, ನೈಟ್ ಡ್ರೆಸ್, ಸಭ್ಯವಲ್ಲದ ಉಡುಗೆ