ಬೆಂಗಳೂರು : ದೆಹಲಿಯಲ್ಲಿ ಸಚಿವರ ಜೊತೆ ಹೈಕಮಾಂಡ್ ನಾಯಕರ ಸಭೆ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಸಚಿವರು ದೆಹಲಿಗೆ ತೆರಳಿದ್ದಾರೆ. ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ ಎನ್ ರಾಜಣ್ಣ ಹಾಗೂ ಆರ್‌ಬಿ ತಿಮಾಪೂರ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ ಏನ್ ರಾಜಣ್ಣ ಚುನಾವಣೆಗು ಮುನ್ನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಮಾಡಿದ್ರೆ ಒಳ್ಳೆಯದಾಗುತ್ತದೆ.
ಈಗಾಗಲೇ ಆ ಬಗ್ಗೆ ಹೈಕಮಾಂಡ್ಗೆ ಸಲಹೆಯನ್ನು ನೀಡಿದ್ದೇವೆ.ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ವರಿಷ್ಠರು 28 ಕ್ಷೇತ್ರಗಳ ಉಸ್ತುವಾರಿ ಸಚಿವರ ಸಭೆಯನ್ನು ಕರೆದಿದ್ದಾರೆ.28 ಕ್ಷೇತ್ರಗಳ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಸಚಿವರು ತಿಳಿಸಿದರು.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಊರುಗಳಲ್ಲೂ ಶ್ರೀ ರಾಮನ ದೇವಸ್ಥಾನಗಳಿವೆ.ಇದಕ್ಕೆ ವಿಶೇಷ ಏನಪ್ಪಾ ಅಂದರೆ ರಾಮನ ಜನ್ಮ ಭೂಮಿಯಲ್ಲಿ ಆಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ವಾಲ್ಮೀಕಿ ದೇಗುಲ ಕಟ್ಟಬೇಕೆಂಬುದು ನಮ್ಮ ಸಮುದಾಯದ ಆಗ್ರಹವಾಗಿದೆ ಎಂದರು.
ಈ ಹಿಂದೆ ರಾಮಲಲ್ಲನನ್ನು ಟೆಂಟ್ ನಲ್ಲಿ ಕೂರಿಸಿದಾಗ ಹೋಗಿದ್ದೆವು. ಮುಂದೆಯೂ ಹೋಗುತ್ತೇವೆ. ಅದು ವೈಯಕ್ತಿಕ ವಿಚಾರ ಎಂದು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಎಬಿ ಏರ್ಪೋರ್ಟ್ ಅಲ್ಲಿ ತಿಳಿಸಿದ್ದಾರೆ.