ಬೆಂಗಳೂರು: ಈಗಾಗಲೇ ಕೇಂದ್ರೀಕೃತ ದಾಖಲಾತಿ ಘಟಕದಿಂದ ಮೊದಲ ಸುತ್ತಿನ ಬಿ.ಎಡ್ ದಾಖಲಾತಿಗೆ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ 2ನೇ ಹಂತದ ಸೀಟು ಹಂಚಿಕೆಯ ಪಟ್ಟಿಯನ್ನು ದಿನಾಂಕ 12-01-2024ರಂದು ಪ್ರಕಟಿಸಲಾಗುತ್ತಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದಿಂದ ನೀಡಿದ್ದು, 2023-24ನೇ ಸಾಲಿನ ಬಿ.ಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ 2ನೇ ಸುತ್ತಿನ ಸೀಟು ಹಂಚಿಕೆ ಪ್ರಕಟಣೆ ದಿನಾಂಕ 12-01-2024ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದಿದೆ.
ಸೀಟು ಹಂಚಿಕಾಯದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು ದಾಖಲಾತಿ ಶುಲ್ಕವನ್ನು ಎಸ್ ಬಿಐ ಬ್ಯಾಂಕಿನಲ್ಲಿ ಪಾವತಿಸಿ ದಿನಾಂಕ 16-01-2024 ರಿಂದ 18-01-2024ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್ ನಲ್ಲಿ ಸಲ್ಲಿಸಿ, ಪ್ರವೇಶಾತಿ ಪತ್ರವನ್ನು ಪಡೆಯುವಂತೆ ಸೂಚಿಸಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.schooleducation.karnataka.gov.in ಅಥವಾ ಸಿಟಿಇ, ಡಯೆಟ್ ನೋಡಲ್ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಿದೆ.
BREAKING : “RSS/ಬಿಜೆಪಿ ಕಾರ್ಯಕ್ರಮ ಅನ್ನೋದು ಸ್ಪಷ್ಟ” : ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ‘ಕಾಂಗ್ರೆಸ್’ ಗೈರು
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಿಂದ ‘ವಿರಾಟ್ ಕೊಹ್ಲಿ’ ಔಟ್