ಬೆಂಗಳೂರು : ನಾಲ್ಕು ವರ್ಷದ ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮುಗಿಸಿ ಐಮಂಗಲ ಠಾಣೆಯಿಂದ ಬೆಂಗಳೂರಿಗೆ ಮಗುವಿನ ಮೃತ ದೇಹ ರವಾನಿಸಲಾಗಿದೆ.
ಬೆಂಗಳೂರಿಗೆ ಮಧ್ಯರಾತ್ರಿ 1:30ಕ್ಕೆ ಮಗುವಿನ ಮೃತದೇಹ ಆಗಮಿಸಿದ್ದು, ಯಶವಂತಪುರ ಬಳಿಯ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯ ತಂದೆಯ ನಿವಾಸಕ್ಕೆ ಮಗುವಿನ ಮೃತದೇಹ ಆಗಮಿಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಇಂದು ಮಧ್ಯಾಹ್ನದವರೆಗೆ ಕುಟುಂಬಸ್ಥರಿಗೆ ಮಗುವಿನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಗೋವಾದಿಂದ ತಾಯಿ ಸುಚನ ಮಗುವನ್ನು ಕೊಂದು ಸೂಟ್ಕೇಸ್ ನಲ್ಲಿ ಕಾರಿನಲ್ಲಿ ಸಾಗಿಸುತ್ತಿರುವಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಪೊಲೀಸರ ಕೈಗೆ ಸಿಗಿ ಬಿದ್ದಿದ್ದಾಳೆ ಈ ವೇಳೆ ತಪಾಸಣೆಯ ವೇಳೆ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸುಚನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುಚನಾ ಹಾಗೂ ಪತಿ ವೆಂಕಟರಮಣ ವಿಚ್ಛೇದನ ಗೊಂಡಿರುವ ದಂಪತಿಗಳಾಗಿದ್ದಾರೆ.
ವಿಚ್ಛೇದನ ಪಡೆದ ನಂತರ ಕೋರ್ಟ್ ತಂದೆಗೆ ಪ್ರತಿವಾರ ಮಗುವನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಇದನ್ನು ತಿಳಿದ ಸುಚನ ತನ್ನ ಪತಿಗೆ ಮಗುವನ್ನು ತೋರಿಸಬಾರದು ಎಂದು 4 ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಆಗದೆ ಇರುವುದರಿಂದ ತಕ್ಷಣ ಕಾರಿನಲ್ಲಿ ಮಗುವನ್ನು ಮೃತ ದೇಹದ ಜೊತೆ ಬೆಂಗಳೂರಿಗೆ ಆಗಮಿಸುವಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಪೊಲೀಸರ ಕೈಗೆ ಸಿಗಿಬಿದ್ದಿದ್ದಾಳೆ. ತಕ್ಷಣ ಮಗುವಿನ ಮಸೂದೆಯವನ್ನು ಹಿರಿಯೂರು ತಾಲೂಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ತಲೆದಿಂಬು ಅಥವಾ ಬೇರೆ ವಸ್ತು ಬಳಸಿ ಮಗುವನ್ನು ಕೊಲ್ಲಲಾಗಿದೆ.ಕೈಯಿಂದ ಕತ್ತು ಹಿಸುಕಿ ಮಗುವನ್ನು ಕೊಲೆ ಮಾಡಿಲ್ಲ ಎಂದು ವೈದರು ಹೇಳಿದ್ದು ಉಸಿರುಗಟ್ಟಿಸಿದ ಕಾರಣ ಮಗು ಮುಖ ಹಾಗೂ ಎದೆ ಭಾಗ ಊದಿಕೊಂಡಿದೆ ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗುತ್ತಿದೆ ಎಂದು ವೈದ್ಯ ಕುಮಾರ್ ಹೇಳಿದ್ದಾರೆ.