ಬೆಂಗಳೂರು: ರಾಜ್ಯದಲ್ಲಿ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸೋ ಸವಾರರ ವಿರುದ್ಧ ಕಾನೂನು ಕ್ರಮ ಕಟ್ಟು ನಿಟ್ಟಾಗಿ ಜರುಗಿಸೋದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ರೇ ಅಂಥವರ ಡಿಎಲ್ ಅಮಾನತಿಗೆ ಸಾರಿಗೆ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ನಿಯಮ ಉಲ್ಲಂಘಿಸಿದ 711 ಸವಾರರ ಡಿಎಲ್ ಅನ್ನು ಅಮಾನತುಗೊಳಿಸೋದಕ್ಕೆ ಸಾರಿಗೆ ಇಲಾಖೆಗೆ ಕಳುಹಿಸಿದ್ದಾರೆ. ಈ ಮೂಲಕ ಪದೇ ಪದೇ ನಿಯಮ ಉಲ್ಲಂಘಿಸೋ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.
ರಾಜ್ಯಾಧ್ಯಂತ ಸಂಚಾರ ನಿಯಮ ಉಲ್ಲಂಘಿಸೋ ವಾಹನ ಸವಾರರಿಗೆ ಶಾಕ್ ನೀಡೋದಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘಿಸೋ ವಾಹನ ಸವಾರರ ಸವಾರರ ವಿರುದ್ಧ ಕೇಸ್ ಹಾಕಿ, ದಂಡವನ್ನು ವಸೂಲಿ ಮಾಡಲಾಗುತ್ತಿದೆ. ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗೆ ದಂಡವನ್ನು ವಿಧಿಸಲಾಗುತ್ತಿದೆ.
ಇದೀಗ ಇದಷ್ಟೇ ಅಲ್ಲದೇ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸೋ ಸವಾರರನ್ನು ಪತ್ತೆ ಹಚ್ಚುತ್ತಿರೋ ಸಂಚಾರ ಪೊಲೀಸರು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದಂತ 2974 ಡ್ರೈವಿಂಗ್ ಲೈಸೆನ್ಸ್ ಅಮಾನತಿಗೆ ಕಳುಹಿಸಿಕೊಡಲಾಗಿದೆ. ಅವುಗಳು ಬೇರೆ ಬೇರೆ ರಾಜ್ಯಗಳಿಗೆ ಸೇರಿದ್ರೇ ಅವರಿಗೆ ಕಳುಹಿಸಿಕೊಡಲಾಗಿದೆ.
ಹೀಗೆ ಕಳುಹಿಸಿಕೊಟ್ಟಂತ 2974 ಡ್ರೈವಿಂಗ್ ಲೈಸೆನ್ಸ್ ಗಳಲ್ಲಿ ಬರೋಬ್ಬರಿ 711 ಲೈಸೆನ್ಸ್ ಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಇಂತಹ ವಾಹನ ಸವಾರರು ವಾಹನಗಳನ್ನು ಓಡಿಸೋದಕ್ಕೆ ಸಾಧ್ಯವಾಗೋದಿಲ್ಲ. ಒಂದು ವೇಳೆ ಲೈಸೆನ್ಸ್ ಅಮಾನತುಗೊಂಡಿದ್ದರೂ ಗಾಡಿ ಓಡಿಸಿದ್ರೇ ನಿಮ್ಮ ವಿರುದ್ಧ ಕೇಸ್ ಹಾಕೋದು ಫಿಕ್ಸ್. ಸೋ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದಂತೆ ಎಚ್ಚರಿಕೆ ವಹಿಸಿ. ಇಲ್ಲವಾದಲ್ಲಿ ನಿಮ್ಮ ಡಿಎಲ್ ಅಮಾನತು ಆಗೋದು ಗ್ಯಾರಂಟಿ.
BIG Alert: ‘ವಾಹನ ಸವಾರ’ರ ಗಮನಕ್ಕೆ: ಜ.16ರಿಂದ ಮತ್ತೆ 4 ದಿನ ಬೆಂಗಳೂರಿನ ‘ಪೀಣ್ಯ ಫ್ಲೈ ಓವರ್ ಕ್ಲೋಸ್’
BREAKING: ‘ಸ್ವಂತ ಮಗ’ನನ್ನೇ ಕೊಂದ ಪ್ರಕರಣ: ‘ಸಿಇಓ ಸುಚನಾ’ 6 ದಿನ ಗೋಪಾ ಪೊಲೀಸರ ಕಸ್ಟಡಿಗೆ