ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಅಬುಧಾಬಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ್ನಲ್ಲಿ ಈ ಬೃಹತ್ ಪ್ರಮಾಣದ ಅಕ್ರಮ ಚಿನ್ನ ದೊರೆತಿದೆ.
ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ ಆತನನ್ನು ವಿಚಾರಣೆ ನಡೆಸಿ ಅವರ ದೇಹವನ್ನು ಪರೀಕ್ಷಿಸುವಾಗ, ಅವರ ಸೊಂಟದ ಪ್ರದೇಶದಲ್ಲಿ ಬೀಪ್ ಶಬ್ದ ಹೊರಹೊಮ್ಮಿದೆ. ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿರುವ 5 ಅಂಡಾಕಾರದ ಆಕಾರದ ಕ್ಯಾಪ್ಸೂಲ್ ಗಳನ್ನು ಅವನ ಗುದನಾಳದಲ್ಲಿ ಮರೆಮಾಡಿ ಸಾಗಾಟ ಮಾಡುತ್ತಿರುವುದು ಬಯಲಾಗಿದ್ದು ಆತನಿಂದ ವಶಕ್ಕೆ ಪಡೆಯಲಾಗಿದೆ. ಇದು 24 ಕ್ಯಾರೆಟ್ ಶುದ್ಧತೆಯ ಚಿನ್ನವಾಗಿದ್ದು 1,579.000 ಗ್ರಾಂ ತೂಕ ಹೊಂದಿದೆ. ಇದರ ಮೌಲ್ಯ ಸುಮಾರು ರೂ. 98,68,750 ಆಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆಯಾಗಿದೆ.