ಕೋಲಾರ : ಜಿಲ್ಲೆಯ, ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನಂಜೇಗೌಡ ಮನೆಯಲ್ಲಿ ಇಡಿ ಹಾಗೂ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿಡಿದ್ದು, ಕಳೆದ 24 ಗಂಟೆಯಿಂದ ಇಡೀ ಅಧಿಕಾರಿಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಶಾಸಕ ಕೆ ವೈ ನಂಜೇಗೌಡ ಮನೆ ಸೇರಿದಂತೆ 15 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ಲಕ್ಷಾಂತರ ರೂಪಾಯಿ ಹಣ ಹಾಗೂ ದಾಖಲೆಗಳು ಸಿಕ್ಕಿರುವ ಮಾಹಿತಿ ಬಂದಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಮ್ಮನಹಳ್ಳಿ ಶಾಸಕರ ನಿವಾಸ ಕೋಚಿಮಲ್ ಕಚೇರಿ, ಕೋಚಿಮಲ್ ಎಂಡಿ ಗೋಪಾಲಮೂರ್ತಿ ಅವರ ಮನೆ ಹಾಗೂ ಅಡ್ಮಿನ್ ಮ್ಯಾನೇಜರ್ ನಾಗೇಶ್, ಹಿಂದಿನ ತಹಶೀಲ್ದಾರ್ ಆಗಿದ್ದ ನಾಗರಾಜ್ ಮನೆ ಕಚೇರಿಗಳಲ್ಲಿ ಇಡಿ ಹಾಗು ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.
ಸರ್ಕಾರಿ ಜಮೀನು ಅಕ್ರಮ ಮಂಜೂರಾತಿ ಹಾಗೂ ವಿದೇಶಿ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಎಲ್ಲಿ ನಿನ್ನೆ ಇಡಿ ಹಾಗು ಐಟಿ ಅಧಿಕಾರಿಗಳು ನಿನ್ನೆ ಕೆ ವೈ ನಂಜೇಗೌಡರ ನಿವಾಸ ಸೇರಿದಂತೆ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದರು.