ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬುದು ಜಗತ್ತಿನ ಕಟುಸತ್ಯ. ಅಧಿಸಾಮಾನ್ಯವಾದಿಗಳು ಸಾವಿನ ಕುರಿತು ದೀರ್ಘಕಾಲ ತನಿಖೆ ಮಾಡಿದ್ದು, ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳು ಮನುಷ್ಯನ ಸಾವಿನ ಸುದ್ದಿಯನ್ನು ಮೊದಲೇ ತಿಳಿಸುತ್ತವೆಯಾಗಿದೆ.
ನಾಯಿಗಳು ಸಾವನ್ನು ಮೊದಲೇ ಗ್ರಹಿಸಬಲ್ಲವು ಎನ್ನಲಾಗಿದೆ. ಯಾರದ್ದಾದರು ಸಾವು ಹತ್ತಿರವಾಗಿದೆ ಎಂದು ತಿಳಿದಾಗ ನಾಯಿಗಳು ಅಳುವ ರೀತಿಯಲ್ಲಿ ಕೂಗಲು ಆರಂಭ ಮಾಡುತ್ತವೆ. ಹಾಗಾಗಿ ಮನೆಯಲ್ಲಿನ ಹಿರಿಯರು ನಾಯಿ ಅಳುವ ರೀತಿಯಲ್ಲಿ ಕೂಗಿದರೆ ಒಳ್ಳೆಯದಲ್ಲ ಎನ್ನುತ್ತಾರೆ. ಬಾವಲಿಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಹಲವರು ಬಲವಾಗಿ ನಂಬುತ್ತಾರೆ. ಕಾಗೆ ಹಾರುವಾಗ ತಲೆಗೆ ತಾಗಿದರೆ ಮಾತ್ರ ಅದನ್ನು ಅಪಶಕುನ ಎನ್ನಲಾಗುತ್ತದೆ.ಆರ್ಥಿಕ ಸಂಕಷ್ಟದಿಂದ ಜೀವನದಲ್ಲಿ ತಾಪತ್ರಯಗಳು ಹೆಚ್ಚಾಗುತ್ತವೆ. ಅದೇ ರೀತಿ, ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಒಂದು ಕೆಟ್ಟ ಘಟನೆ ನಡೆಯುವ ಮುನ್ಸೂಚನೆ ಎನ್ನಲಾಗುತ್ತದೆ. ಹಗಲಿನಲ್ಲಿ ನರಿ ಮನೆಗೆ ಬಂದರೆ ಆ ಮನೆಯಲ್ಲಿ ಯಾರಾದರೂ ಸಾಯುತ್ತಾರೆ ಎನ್ನಲಾಗುತ್ತದೆ. ನರಿಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಂಡುಬರುವುದಿಲ್ಲ. ಹೀಗಾಗಿ, ಹಗಲಿನಲ್ಲಿ ನರಿಯು ಮನೆಗೆ ಪ್ರವೇಶಿಸುವುದನ್ನು ಸಾವು ಎಂದು ಪರಿಗಣಿಸಲಾಗುತ್ತದೆ. ಹಿಂದಿನಿಂದಲೂ ಬೆಕ್ಕುಗಳು ಸಾವನ್ನು ಮುನ್ಸೂಚಿಸುತ್ತವೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಬೆಕ್ಕುಗಳು ಕಾದಾಡುವುದು ಜಗಳ ಮಾಡುವುದು ಅಶುಭ ಎನ್ನಲಾಗಿದೆ. ಬೆಕ್ಕುಗಲು ಹೀಗೆ ಕಚ್ಚಾಡುವುದನ್ನು ಸಾವನ್ನು ಊಹಿಸುವ ಸಂಕೇತವೆನ್ನಲಾಗುತ್ತದೆ. ಕಪ್ಪು ಚಿಟ್ಟೆ ಸಾವಿನ ಸಂದೇಶವಾಹಕ ಎಂದು ಹೇಳಲಾಗುತ್ತದೆ. ರಾತ್ರಿಯ ಕತ್ತಲೆಯಲ್ಲಿ ಈ ಕಪ್ಪು ಚಿಟ್ಟೆ ಹಾರುವುದನ್ನು ಅನೇಕರು ಹಿರಿಯರು ಅಶುಭ ಶಕುನವೆಂದು ಪರಿಗಣಿಸುತ್ತಾರೆಯಾಗಿದೆ.