ಮಾಲೆ(ಮಾಲ್ಡೀವ್ಸ್): ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾರತದ ವಿರುದ್ಧ ದ್ವೇಷದ ಭಾಷೆಯನ್ನು ಬಳಸುತ್ತಿರುವುದನ್ನು ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಖಂಡಿಸಿದ್ದಾರೆ.
ಮಾಲ್ಡೀವ್ಸ್ ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ವಿರುದ್ಧ ದ್ವೇಷದ ಭಾಷೆಯನ್ನು ಬಳಸುವುದನ್ನು ನಾನು ಖಂಡಿಸುತ್ತೇನೆ ಎಂದು ಸೋಲಿಹ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತವು ಯಾವಾಗಲೂ ಮಾಲ್ಡೀವ್ಸ್ಗೆ ಉತ್ತಮ ಸ್ನೇಹಿತನಾಗಿದೆ ಮತ್ತು ಅಂತಹ ಕಠೋರ ಹೇಳಿಕೆಗಳು ನಮ್ಮ ಎರಡೂ ದೇಶಗಳ ನಡುವಿನ ಹಳೆಯ ಸ್ನೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ನಾವು ಅವಕಾಶ ನೀಡಬಾರದು” ಎಂದು ಅವರು ಒತ್ತಿ ಹೇಳಿದ್ದಾರೆ.