ಬೆಂಗಳೂರು : ಕೆ ಎಸ್ ಆರ್ ಟಿ ಸಿ ಯು 2024 ನೇ ವರ್ಷವನ್ನು “ಪ್ರಯಾಣಿಕ ಸ್ನೇಹಿ ವರ್ಷ” ವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು “ಕಾರ್ಮಿಕ ಕಲ್ಯಾಣ ವರ್ಷ” ಎಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಈ ಬಗ್ಗೆ ನಿಗಮದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
- ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ.
- ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ’ ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.
- ತನ್ನ ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ.
- ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
- ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ.
- ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು : (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ.
- ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ.
- ನಿಗಮಗಳಿಗೆ ಸ್ನಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ.
- ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ.
- ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ. ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳನ್ನು ಪಾವತಿಸಲಾಗುವುದು.
- ಮುಂದುವರೆದು, 2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳು ಕಿರುನೋಟ ಇಲ್ಲಿದೆ.
- ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ
ಮಾಡಲಾಗಿದೆ.
• ಪುಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ.
• ಅಂಬಾರಿ ಉತ್ಸವ, 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ, 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ನಿಕ್ ಬಸ್ಸುಗಳು-500
ಪುಸ್ತುತ ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.
1000 ವಾಹನಗಳ ಪುನಶ್ಚತನ ಯೋಜನೆಯ ಗುರಿ ಹೊಂದಲಾಗಿದೆ.
• ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
• ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ,
ಪಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.
• ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು
• ಚಾಲನಾ ಸಿಬ್ಬಂದಿಗಳು ಪಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ |ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ