ಈಗ ಜನರ ವೇಗದ ಜೀವನ, ಒತ್ತಡ ಭರಿತ ಬದುಕಿನಲ್ಲಿ ಬಹುತೇಕ ಜನರು ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಹಾರ, ಕಲುಷಿತ ವಾತಾವರಣ ಇತ್ಯಾದಿಗಳು. ಕೆಲವೊಮ್ಮೆ ಈ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಕೆಲವರಿಗೆ ಮುಜುಗುರ ಉಂಟು ಮಾಡಬಹುದು. ಆದರೆ ಇದನ್ನು ಮರೆಮಾಚಲು ಹಲವಾರು ಮಂದಿ ಹಲವು ವಿಧದ ಬಣ್ಣಗಳನ್ನು ಬಳಕೆ ಮಾಡುತ್ತಾರೆ. ಆದರೆ ಇವುಗಳಿಂದ ಹಾನಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವೊಂದು ನೈಸರ್ಗಿಕ ಪರಿಹಾರಗಳಿಗೆ ಮೊರೆ ಹೋಗುವುದು ಉತ್ತಮ. ಇದರಲ್ಲಿ ಚಹಾ ಎಲೆಗಳು ಕೂಡಾ ಉತ್ತಮ ಬಳಕೆ ಎಂದು ಹೇಳಬಹುದು.
ಮೊದಲಿಗೆ ನೀವು ಎರಡು ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ 5,6 ಚಮಚ ಚಹಾ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಕಡಿಮೆಯಾದಾಗ ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಸುಮಾರು ಮೂವತ್ತು ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ನೀರಿನಿಂದ ತಲೆಕೂದಲನ್ನು ತೊಳೆಯಿರಿ. ಈ ವಿಧಾನದಿಂದ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹದು. ಟೀ ಎಲೆಗಳಲ್ಲಿ ಟ್ಯಾನಿಕ್ ಆಮ್ಲ ಇದೆ. ಇದು ಕೂದಲು ಬಿಳಿಯಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಆಂಟಿಆಕ್ಸಿಡೆಂಟ್‌ಗಳು, ಉರಿಯೂತದ ಗುಣ ಲಕ್ಷಣ ಹೊಂದಿರುವ ಪೋಷಕಾಂಶಗಳು ಕೂಡಾ ಇದೆ. ಹೀಗಾಗಿ ಕೂದಲಿನ ಅನೇಕ ಸಮಸ್ಯೆ ನಿವಾರಿಸುವ ಗುಣ ಇದು ಹೊಂದಿದೆಯಾಗಿದೆ.